ಮೈಸೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹಾಗೂ ಶಾಸಕ ಜಿ.ಟಿ.ದೇವೆಗೌಡ ನಡುವೆ ಜಟಾಪಟಿ ಮುಂದುವರೆದಿದ್ದು, ಕೆ.ಆರ್.ನಗರಕ್ಕೆ ಅಭಿನಂದನೆಗೆ ಬಂದವರು ರಾಜಕೀಯವಾಗಿ ಬರಲಾರರು. ರಾಜಕೀಯವಾಗಿ ಬಂದರೆ ಅವರನ್ನು ಎದುರಿಸಲು ನಾನು ಸಿದ್ಧ ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.
ಜಿಟಿಡಿ ಕುಟುಂಬಕ್ಕೆ ಟಾಂಗ್ ಕೊಟ್ಟ ಸಾರಾಮ ಓದಿ: ಕೇರಳದಲ್ಲಿ ವಿಧಾನಸಭಾ ಚುನಾವಣೆ: ಸ್ಟಾರ್ ಪ್ರಚಾರಕರಾಗಿ ರಾಹುಲ್, ಪ್ರಿಯಾಂಕಾ
ಸೋಮವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿನಂದನೆ, ಹುಟ್ಟುಹಬ್ಬ, ಶವಸಂಸ್ಕಾರಕ್ಕೆ ಬಂದವರೆಲ್ಲಾ ರಾಜಕೀಯ ಮಾಡಕ್ಕಾಗಲ್ಲ ಎಂದು ಶಾಸಕ ಜಿ.ಟಿ.ದೇವೆಗೌಡ ಕುಟುಂಬಕ್ಕೆ ಸಾ.ರಾ.ಮಹೇಶ್ ಟಾಂಗ್ ಕೊಟ್ಟಿದ್ದಾರೆ. ಹಿಂದೆ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾದವರನ್ನೇ 23 ಸಾವಿರ ಅಂತರದಲ್ಲಿ ಸೋಲಿಸಿದ್ದೇನೆ. ಕೆ.ಆರ್.ನಗರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ ಎದುರಿಸಲು ಸಿದ್ಧನಿದ್ದೇನೆ ಎಂದರು.
ನಾನು ಈ ಹಿಂದೆ ಬಿಜೆಪಿಯಲ್ಲೇ ಇದ್ದವನು, ಶ್ರೀರಾಮ ಮಂದಿರಕ್ಕಾಗಿ ಇಟ್ಟಿಗೆ ಹೊತ್ತವನು. ಅದನ್ನ ನಾವು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಈಗ ದೇಣಿಗೆ ನೀಡುವ ಸಂದರ್ಭ ಬಂದಿದೆ.
ನಾನು ನನ್ನ ಕೈಲಾದ ಅಳಿಲು ಸೇವೆಯಾಗಿ 5 ಲಕ್ಷ ನೀಡಿದ್ದೇನೆ ಎಂದರು.
ಶ್ರೀರಾಮ ದೇವಾಲಯ ಯಾವುದೇ ಪಕ್ಷದ ಆಸ್ತಿಯಲ್ಲ, ಶ್ರೀ ರಾಮ ಎಲ್ಲರ ಆಸ್ತಿ. ಹೀಗಾಗಿ ಎಲ್ಲರೂ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ನಾನು ಕೂಡ ನನ್ನ ಕೈಲಾದ ಅಳಿಲು ಸೇವೆಯನ್ನ ಮಾಡಿದ್ದೀನಿ ಎಂದು ತಿಳಿಸಿದರು.
ಸಾರಾ ಜತೆ ಮಾತಾಡ್ತೇವಿ: ಸಚಿವ ಸೋಮಶೇಖರ್
ಸಚಿವ ಸೋಮಶೇಖರ್ ಅವರು ಮೇಯರ್ ಚುನಾವಣೆಯಲ್ಲಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈಸೂರು ಭಾಗದ ನಾಯಕ ಎಂದು ಅವರ ವರಿಷ್ಠರು ಹೇಳಿದ್ದಾರೆ. ಹಾಗಾಗಿ ಸಾರಾ ಮಹೇಶ್ ಬಳಿ ಮೈತ್ರಿಗೆ ಮನವಿ ಮಾಡುತ್ತೇವೆ. ಮೈತ್ರಿಯಾದರೆ ಮೇಯರ್ ಸ್ಥಾನ ಬಿಜೆಪಿಗೆ ನೀಡುವಂತೆ ಕೇಳುತ್ತೇವೆ. ಸದ್ಯ ಮೀಸಲಾತಿ ಇನ್ನೂ ಪಟ್ಟಿ ಪ್ರಕಟವಾಗಿಲ್ಲ.
ಪಟ್ಟಿ ಬಿಡುಗಡೆಯಾದ ಬಳಿಕ ಸಾರಾ ಜೊತೆ ಮತ್ತೆ ಮಾತನಾಡುತ್ತೇವೆ ಎಂದರು.