ಮೈಸೂರು: ಕ್ಷೇತ್ರದ ಜನರು ಕೋವಿಡ್ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದು, ಶಾಸಕ ಸಾ ರಾ ಮಹೇಶ್ ತಮ್ಮ ಗಾರ್ಮೆಂಟ್ಸ್ ಕಟ್ಟಡವನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿ ಜನರಿಗೆ ಅರ್ಪಿಸಿದ್ದಾರೆ.
ಸ್ವಂತ ಖರ್ಚಿನಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿದ ಶಾಸಕ ಸಾ.ರಾ.ಮಹೇಶ್ - ಸ್ವಂತ ಖರ್ಚಿನಲ್ಲಿ ಕೋವಿಡ್ ಆಸ್ಪತ್ರೆ
ಕೆ.ಆರ್.ನಗರ ವ್ಯಾಪ್ತಿಯಲ್ಲಿ ಪ್ರತಿ ದಿನ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ಇದರಿಂದ ಶಾಸಕರು ಈ ನಿರ್ಧಾರ ಮಾಡಿದ್ದಾರೆ..
Hospital
ಕೆ.ಆರ್ ನಗರದ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಾ ರಾ ಮಹೇಶ್ ತಾಲೂಕಿನ ಕಗ್ಗೇರೆ ಗ್ರಾಮದ ಬಳಿ ಇದ್ದ ತನ್ನ ಗಾರ್ಮೆಂಟ್ಸ್ ಕಟ್ಟಡವನ್ನು ತಾತ್ಕಾಲಿಕವಾಗಿ 200 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಸ್ವಂತ ಹಣದಿಂದ ವೈದ್ಯರನ್ನು ನೇಮಿಸಿ ಈ ಆಸ್ಪತ್ರೆಯನ್ನು ಇಂದು ಉದ್ಘಾಟನೆ ಮಾಡಿದರು.
ಕೆ.ಆರ್.ನಗರ ವ್ಯಾಪ್ತಿಯಲ್ಲಿ ಪ್ರತಿ ದಿನ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ಇದರಿಂದ ಶಾಸಕರು ಈ ನಿರ್ಧಾರ ಮಾಡಿದ್ದಾರೆ.