ಮೈಸೂರು: ನೀವು ಚಾಮುಂಡೇಶ್ವರಿಗೆ, ಮಗನಿಗೆ ಕೆ.ಆರ್. ನಗರ ಕ್ಷೇತ್ರ ಕೇಳ್ತೀರಾ? ಏನು ನಿಮ್ಮದು ಮಹಾರಾಜರ ವಂಶನಾ? ಎಂದು ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ಶಾಸಕ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.
ಭೇರ್ಯ ಗ್ರಾಮದಲ್ಲಿ ಏತ ನೀರಾವರಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದು ಹಾಗೂ ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದಕ್ಕಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಕೆ.ಆರ್. ನಗರಕ್ಕೆ ಶಾಸಕ ಜಿ.ಟಿ ದೇವೇಗೌಡ ಮಗನಿಗೆ ಟಿಕೆಟ್ ಕೇಳಿರುವ ವಿಚಾರವಾಗಿ ವೇದಿಕೆಯಲ್ಲಿ ಮಾತನಾಡಿದ ಅವರು, ನಾನೇನು ಸತ್ತು ಹೋಗಿದ್ದೀನಾ? ಮೂರು ಸಲ ಸತತವಾಗಿ ಇಲ್ಲಿ ನಾನು ಗೆದ್ದಿದ್ದೇನೆ, ನಿಮಗೆ ಹೃದಯ ಇಲ್ಲವಾ, ಮನಸಾಕ್ಷಿ ಇಲ್ಲವಾ? ಎಂದು ಪ್ರಶ್ನಿಸಿದರು.