ಕರ್ನಾಟಕ

karnataka

ETV Bharat / city

ಹುಣಸೂರು ಜಿಲ್ಲೆ ಬಗ್ಗೆ ವಿರೋಧಿಸಿದ್ದ ಶಾಸಕ ಮಂಜುನಾಥ್ ಈಗ ಹೀಗಂತಾರೆ.. - ಶಾಸಕ ಹೆಚ್‌.ಪಿ.ಮಂಜುನಾಥ್

ಹುಣಸೂರು, ಕೆಆರ್‌ನಗರ, ಸಾಲಿಗ್ರಾಮ, ಪಿರಿಯಾಪಟ್ಟಣ, ಹೆಚ್‌ ಡಿ ಕೋಟೆ,‌ ಸರಗೂರು ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡಬೇಕು..

MLA Manjunath
ಶಾಸಕ ಮಂಜುನಾಥ್

By

Published : Nov 27, 2020, 5:39 PM IST

ಮೈಸೂರು: ಹುಣಸೂರನ್ನು ಜಿಲ್ಲೆಯನ್ನಾಗಿ ಮಾಡುವಂತೆ ಶಾಸಕ ಹೆಚ್ ಪಿ ಮಂಜುನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹುಣಸೂರು ಉಪಚುನಾವಣೆಯಲ್ಲಿ ಹುಣಸೂರನ್ನು ಜಿಲ್ಲೆ ಮಾಡಬೇಕು ಎನ್ನುವ ಹೆಚ್.ವಿಶ್ವನಾಥ್ ಕೂಗಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಮಂಜುನಾಥ್‌, ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಮಾಡಿದಂತೆ, ಹುಣಸೂರು ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹುಣಸೂರನ್ನು ಜಿಲ್ಲೆ ಮಾಡುವ ಕುರಿತು ಮಂಜುನಾಥ್ ಪ್ರತಿಕ್ರಿಯೆ

ಹೆಚ್.ವಿಶ್ವನಾಥ್ ಅವರು ಉಪಚುನಾವಣೆ ಸಂದರ್ಭದಲ್ಲಿ ಹೇಳಿದ್ದು ತರವಲ್ಲ. ಈಗ ಸೂಕ್ತ ಸಮಯ ಬಂದಿದೆ. ಜಿಲ್ಲೆ ಮಾಡಿದ್ರೆ ಅನುಕೂಲವಾಗಲಿದೆ ಎಂದರು‌. ಹುಣಸೂರು, ಕೆಆರ್‌ನಗರ, ಸಾಲಿಗ್ರಾಮ, ಪಿರಿಯಾಪಟ್ಟಣ, ಹೆಚ್‌ ಡಿ ಕೋಟೆ,‌ ಸರಗೂರು ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡಬೇಕು. ಹಣಕಾಸಿನ ವ್ಯವಸ್ಥೆ ಮಾಡಿಕೊಂಡು ಜಿಲ್ಲೆಯ ರಚನೆ ಮಾಡಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details