ಕರ್ನಾಟಕ

karnataka

ETV Bharat / city

ದಲಿತ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲೇಬೇಕು: ಶಾಸಕ ಹರ್ಷವರ್ಧನ್ - Mysore

ದಲಿತ ಸಮಯದಾಯದ ಒಬ್ಬರಿಗಾದರೂ ಸಚಿವ ಸ್ಥಾನ ಕೊಡಲೇಬೇಕು ಎಂದು ಶಾಸಕ ಹರ್ಷವರ್ಧನ್‌ ಆಗ್ರಹಿಸಿದ್ದಾರೆ.

MLA Harshvardhan
ಶಾಸಕ ಹರ್ಷವರ್ಧನ್

By

Published : Jul 29, 2021, 5:31 PM IST

ಮೈಸೂರು:ಸಚಿವ ಸಂಪುಟ ರಚನೆ ಮಾಡಲು ಸಿಎಂ ಬಸವರಾಜ​​ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸರ್ಕಸ್ ಮಾಡುತ್ತಿರುವ ಬೆನ್ನಲ್ಲೇ ದಲಿತ ಸಮುದಾಯಕ್ಕೂ ಸಚಿವ ಸ್ಥಾನ ನೀಡಲೇಬೇಕು ಎಂದು ನಂಜನಗೂಡು ಶಾಸಕ ಹರ್ಷವರ್ಧನ್‌ ಆಗ್ರಹಿಸಿದ್ದಾರೆ.

ದಲಿತ ಸಮಯದಾಯದ ಒಬ್ಬರಿಗಾದರೂ ಸಚಿವ ಸ್ಥಾನ ನೀಡಿ: ಶಾಸಕ ಹರ್ಷವರ್ಧನ್ ಆಗ್ರಹ

ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ದಲಿತ (ಬಲಗೈ) ಸಮಯದಾಯದ ಒಬ್ಬರಿಗಾದರೂ ಸಚಿವ ಸ್ಥಾನ ಕೊಡಲೇ ಬೇಕು. ನಾನು, ನೆಹರು ಓಲೇಕರ್, ಕುಮಾರಸ್ವಾಮಿ ಮೂರು ಜನ ಬಲಗೈ ಸಮುದಾಯಕ್ಕೆ ಸೇರಿದ್ದೇವೆ. ಯಾರಿಗೂ ನಿಗಮ ಮಂಡಳಿ ಸ್ಥಾನ ನೀಡಿ ಕಣ್ಣೊರೆಸಬೇಡಿ ಎಂದು ಒತ್ತಾಯಿಸಿದರು.

ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆದಾಗ ಅವರ ಹೆಸರಿನಲ್ಲಿ ಪೂಜೆ ಮಾಡಿಸಿದ್ದೆ. ಈಗ ಬಸವರಾಜ್​​ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರ ಹೆಸರಿನಲ್ಲಿಯೂ ಪೂಜೆ ಮಾಡಿಸಿದ್ದೇನೆ. ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸಿಎಂ ನಂಜನಗೂಡಿಗೆ ಬರಲಿದ್ದಾರೆ ಎಂದರು.

ABOUT THE AUTHOR

...view details