ಮೈಸೂರು:ನಾನು ಜೆಡಿಎಸ್ನಲ್ಲೇ ಇರಬೇಕಾ, ಕಾಂಗ್ರೆಸ್ ಸೇರಬೇಕಾ ಅಥವಾ ಬಿಜೆಪಿಗೆ ಹೋದರೆ ಒಳ್ಳೆಯದಾ ಎಂಬ ಬಗ್ಗೆ ಕೊರೊನಾ ಕಡಿಮೆಯಾದ ನಂತರ ಕ್ಷೇತ್ರದ ಪ್ರವಾಸ ಮಾಡಿ ಮತದಾರರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಇಂದು ತಮ್ಮ ಚಾಮುಂಡೇಶ್ವರಿ ಕ್ಷೇತ್ರದ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಈ ವೇಳೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದರು. ಚುನಾವಣೆಗೆ ಇನ್ನೂ 23 ತಿಂಗಳು ಬಾಕಿಯಿದೆ. ಈಗಲೇ ಅಧಿಕಾರದ ಬಗ್ಗೆ ಮಾತನಾಡಬಾರದು. ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ಮತದಾರರು ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಕಾಯಬೇಕು ಎಂದರು.
ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿಯ ಬಗ್ಗೆ ಉತ್ತರಿಸಿದ ಅವರು, ನಾನು ಜೆಡಿಎಸ್ನಲ್ಲೇ ಇರಬೇಕಾ, ಕಾಂಗ್ರೆಸ್ ಸೇರಬೇಕಾ ಅಥವಾ ಬಿಜೆಪಿಗೆ ಹೋದರೆ ಒಳ್ಳೆಯದಾ ಎಂಬ ಬಗ್ಗೆ ಕೊರೊನಾ ಕಡಿಮೆಯಾದ ನಂತರ ಕ್ಷೇತ್ರದ ಪ್ರವಾಸ ಮಾಡಿ ಮತದಾರರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಹಿಂದೆ ಹುಣಸೂರು ಜನರ ಮಾತು ಕೇಳದೆ ಬಿಜೆಪಿಯಿಂದ ಚುನಾವಣೆಗೆ ನಿಂತು ಸೋತಿದ್ದೆ. ಅಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಹೇಳಿದರು.