ಮೈಸೂರು:ನಾಡಗೀತೆಯನ್ನು ರಾಜ್ಯಾದ್ಯಂತ ಒಂದೇ ರಾಗದಲ್ಲಿ ಹಾಡುವಂತೆ ಮಾಡಲು ಹಾಗೂ ಹಾಡುವ ಸಮಯವನ್ನು ಏಕರೂಪಕ್ಕೆ ತರಲು ಚಿಂತಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಗೀತೆಯನ್ನು ಮೊಟಕು ಮಾಡಬೇಕು ಎಂಬ ಉದ್ದೇಶವಿಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಹಾಡುವ ಸಮಯವೂ ಕೂಡಾ ಹೆಚ್ಚು ಕಡಿಮೆ ಇರುತ್ತದೆ. ಇದನ್ನು ಏಕರೂಪ ಮಾಡುವ ಉದ್ದೇಶ ಇದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.