ಮೈಸೂರು :ನಾವು ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದ ಕಾರಣ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ. ಯಾವುದಾದರೂ ವಿಚಾರದಲ್ಲಿ ನಮ್ಮನ್ನು ತೇಜೋವಧೆ ಮಾಡಬಹುದು ಅನ್ನೋ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ನ್ಯಾಯಾಲಯಕ್ಕೆ ಸಚಿವರು ಮೊರೆ ಹೋಗಿದ್ಯಾಕೆ?.. ಈ ಬಗ್ಗೆ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ.. ಓದಿ: ಜಿಮ್, ಪಾರ್ಕ್ ಮತ್ತೆ ಕ್ಲೋಸ್? ಕೋವಿಡ್ ಪರಿಸ್ಥಿತಿ ಎದುರಿಸಲು ಆಂಬ್ಯುಲೆನ್ಸ್, ಬೆಡ್ ಸಜ್ಜುಗೊಳಿಸ್ತಿದೆ ಪಾಲಿಕೆ
ಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಕ್ಕಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಕೇವಲ ಸಿಡಿಗಾಗಿ ತಡೆ ಕೋರಿರಲಿಲ್ಲ. ಯಾವುದಾದರೂ ವಿಚಾರದಲ್ಲಿ ನಮ್ಮನ್ನು ತೇಜೋವಧೆ ಮಾಡಬಹುದು ಅನ್ನೋ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಲಾಗಿದೆ. ನ್ಯಾಯಾಲಯ ಮಾರ್ಚ್ 31ರವರೆಗೂ ತಡೆಯಾಜ್ಞೆ ನೀಡಿದೆ ಎಂದರು.
ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ತಡೆಯೊಡ್ಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪುನರ್ ಪರಿಶೀಲಿಸುವೆ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಮಾಹಿತಿ ನೀಡಲಾಗುವುದು. ಅವರ ಜೊತೆ ಮಾತನಾಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.