ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮಾತನಾಡುತ್ತಿದ್ದಾಗ ಅವರ ಮಾತಿಗೆ ತೂಕ ಇತ್ತು. ಆದರೀಗ ಅವರ ಮಾತಿಗೆ ತೂಕವಿಲ್ಲ. ಅವರ ಮಾತನ್ನು ಅವರ ಪಕ್ಷದಲ್ಲಿಯೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.
ಆರ್‌ಎಸ್‌ಎಸ್ ಮೂಲದ ಬಗ್ಗೆ ಪ್ರಶ್ನಿಸಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ಬಗ್ಗೆ ಸ್ಟಡಿ ಮಾಡಿಲ್ಲ. ಈ ಹಿಂದೆ ಅವರಿಗೆ ಬನ್ನಿ ಆರ್‌ಎಸ್‌ಎಸ್ ಕಚೇರಿಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿನ ಕೆಲಸದ ಬಗ್ಗೆ ಸ್ಟಡಿ ಮಾಡಿ ಎಂದಿದ್ದೆ. ಆರ್‌ಎಸ್‌ಎಸ್ ದೇಶ ಭಕ್ತಿ, ಸಂಘಟನೆ, ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತದೆ. ಸಿದ್ದರಾಮಯ್ಯನವರಿಗೆ ಸದ್ಯದಲ್ಲೇ ಆರ್‌ಎಸ್‌ಎಸ್ ಸಂಘಟನೆಯ ಪುಸ್ತಕ ಕಳುಹಿಸಿಕೊಡುತ್ತೇನೆ, ತಿಳಿದುಕೊಳ್ಳಲಿ ಎಂದರು.