ಮೈಸೂರು: ಸಚಿವ ಕೆ.ಎಸ್ ಈಶ್ವರಪ್ಪ ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆ. ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಮೈಸೂರಿನಲ್ಲಿ ಸಚಿವ ಕೆ ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ. ಇಂದು ಮೈಸೂರಿನ ಲಲಿತ್ ಮಹಲ್ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಗೋಪಾಲಯ್ಯ ಅವರು, ಈಶ್ವರಪ್ಪ ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರನೊಬ್ಬ ದೆಹಲಿಗೆ ಹೋಗಿದ್ದು ಯಾಕೆ? ಆತನಿಗೆ ಟಿಕೆಟ್ ಬುಕ್ ಮಾಡಿದ್ದು ಯಾರು? ಯಾರ ಅಕೌಂಟ್ನಿಂದ ಟಿಕೆಟ್ ಬುಕ್ ಆಗಿದೆ? ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.
ಈಶ್ವರಪ್ಪ ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆ : ಸಚಿವ ಗೋಪಾಲಯ್ಯ! - ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ
ಈಶ್ವರಪ್ಪನವರು ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆ. ಗುತ್ತಿಗೆದಾರನೊಬ್ಬ ದೆಹಲಿಗೆ ಹೋಗಿದ್ದು ಯಾಕೆ? ಆತನಿಗೆ ಟಿಕೆಟ್ ಬುಕ್ ಮಾಡಿದ್ದು ಯಾರು? ಯಾರ ಅಕೌಂಟ್ನಿಂದ ಟಿಕೆಟ್ ಬುಕ್ ಆಗಿದೆ? ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಸಚಿವ ಕೆ ಗೋಪಾಲಯ್ಯ ತಿಳಿಸಿದರು..
ಸಚಿವ ಗೋಪಾಲಯ್ಯ
ಇದನ್ನೂ ಓದಿ:ಈ ಘಟನೆ ಹಿಂದೆ ಖಂಡಿತ ದೊಡ್ಡಮಟ್ಟದ ಕೈವಾಡವಿದೆ.. ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕಾರಣ.. ಅರುಣ್ ಸಿಂಗ್
ಇನ್ನೂ ಸಿಎಂ ಉಡುಪಿಗೆ ಹೋದಾಗ ಮೃತ ಸಂತೋಷ್ ಯಾಕೆ ಅಲ್ಲಿಗೆ ಹೋಗಿದ್ದರು. ಸಂತೋಷ್ ಜೊತೆ ಹೋಗಿದ್ದ ಸ್ನೇಹಿತರು ಎಲ್ಲಿಗೆ ಹೋದರು? ಎಂಬುದರ ಬಗ್ಗೆ ತನಿಖೆಯಾಗಬೇಕಿದೆ ಎಂದರು. ಇನ್ನೂ ನಾವು ಈಶ್ವರಪ್ಪನವರ ಜೊತೆ ಇದ್ದೇವೆ ಎಂದು ತಿಳಿಸಿದರು.