ಕರ್ನಾಟಕ

karnataka

ETV Bharat / city

NEET Resultನಲ್ಲಿ ಮೈಸೂರಿನ ಮೇಘನ್​ಗೆ 5ನೇ ರ‍್ಯಾಂಕ್.. ಡಾಕ್ಟರ್​ ಆಗುವ ಕನಸು ನನಸು - NEET exam result

ಮೆಡಿಕಲ್, ಡೆಂಟಲ್ ಪ್ರವೇಶಕ್ಕೆ ನಡೆದಿದ್ದ 2021ನೇ ಸಾಲಿನ ನೀಟ್ ಫಲಿತಾಂಶ(NEET Result) ಸೋಮವಾರ ಪ್ರಕಟವಾಗಿದ್ದು, ಮೈಸೂರಿನ ವಿದ್ಯಾರ್ಥಿಯೊಬ್ಬ 5ನೇ ರ‍್ಯಾಂಕ್ ಪಡೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ‌.

meghan
ನೀಟ್ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದ ಮೇಘನ್

By

Published : Nov 2, 2021, 10:19 AM IST

ಮೈಸೂರು: ವೈದ್ಯಕೀಯ ಕೋರ್ಸ್​ ಪ್ರವೇಶಕ್ಕಾಗಿ ನಡೆಯುವ ನೀಟ್​ ಪರೀಕ್ಷೆಯ ಫಲಿತಾಂಶ (NEET Result) ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಐದನೇ ರ‍್ಯಾಂಕ್​ ಪಡೆಯುವ ಮೂಲಕ ಡಾಕ್ಟರ್​ ಆಗುವ ಕನಸು ನನಸಾಗಿದೆ.

'ಈಟಿವಿ ಭಾರತ'ದೊಂದಿಗೆ ಸಂತಸ ಹಂಚಿಕೊಂಡಿರುವ ಮೇಘನ್, ನನಗೆ ಈ ಫಲಿತಾಂಶ ಖುಷಿ ತಂದಿದೆ. ಡಾಕ್ಟರ್ ಆಗಬೇಕೆಂದು ಕಷ್ಟಪಟ್ಟು ಓದಿದೆ. ಒಳ್ಳೆಯ ರಿಸಲ್ಟ್ ಬಂದಿದೆ. 720 ಅಂಕಗಳಿಗೆ 715 ಅಂಕಗಳು ಬಂದಿವೆ. ನನ್ನ ವಿದ್ಯಾಭ್ಯಾಸಕ್ಕೆ ತಂದೆ, ತಾಯಿ ತುಂಬಾ ಸಹಕಾರ ನೀಡಿದ್ದಾರೆ. ಅವರ ಪ್ರೋತ್ಸಾಹದಿಂದ ಈ ಫಲಿತಾಂಶ ಬರಲು ಸಾಧ್ಯವಾಯಿತು ಎಂದಿದ್ದಾರೆ.

ನೀಟ್ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದ ಮೇಘನ್

ಮೊದಲ ದಿನದಿಂದಲೇ ನಾನು ಒಂದು ನೀಲ ನಕ್ಷೆ ತಯಾರಿಸಿಕೊಂಡು ಆ ದಿನದ ಎಲ್ಲಾ ಪಠ್ಯಗಳನ್ನು ಓದಬೇಕು. ಪರೀಕ್ಷೆ ಹತ್ತಿರ ಬಂದಾಗ ಅಣುಕು ಪರೀಕ್ಷೆಗಳನ್ನು ಬರೆಯಬೇಕು ಎಂದು ಪ್ಲಾನ್​ ಮಾಡಿಕೊಂಡಿದ್ದೆ. ಕಳೆದ ಎರಡು ವರ್ಷ ಕೋವಿಡ್​ನಿಂದಾಗಿ ಸವಾಲಿನಿಂದ ಕೂಡಿತ್ತು. ಆ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಗುರಿ ಇಟ್ಟುಕೊಂಡು ಓದಿದೆ. ಚೆನ್ನಾಗಿ ಓದಬೇಕು ಎಂಬುದೇ ನನ್ನ ಮುಂದಿನ ಗುರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದನು.

ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಐದು ವಿಭಾಗದಲ್ಲಿ ‌ಮೊದಲ ಐದು ರ‍್ಯಾಂಕ್ ಪಡೆದಿದ್ದ ಮೇಘನ್, ಈಗ ನೀಟ್ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ABOUT THE AUTHOR

...view details