ಕರ್ನಾಟಕ

karnataka

ETV Bharat / city

ತಹಶೀಲ್ದಾರ್ ಮಧ್ಯಸ್ಥಿಕೆಯಿಂದ ತಗಡೂರು ದೇವಾಲಯದ ವಿವಾದಕ್ಕೆ ಇತ್ಯರ್ಥ.. - ತಹಶಿಲ್ದಾರರ ಮಧ್ಯಸ್ಥಿಕೆಯಿಂದ ಈ ಸಮಸ್ಯೆ ಬಗೆಹರಿದಿದ್ದು

ದೇವಾಲಯದ ಬಾಗಿಲು ತೆರೆಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಪೂಜೆ ಆರಂಭವಾಗಿದೆ. ಹಾಗೆಯೇ ಇನ್ನೂ ಮುಂದೆ ಈ ತರಹದ ಕಿತ್ತಾಟಗಳು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನೂ ಸಹ ಪೋಲಿಸರು ನೀಡಿದ್ದಾರೆ.

KN_MYS_5_TEMPLE_PROBLEM_SOLVE_NEWS_7208092
ತಹಶೀಲ್ದಾರರ ಮಧ್ಯಸ್ಥಿಕೆ, ಕೊನೆಗೂ ಬಗೆಹರಿದ ತಗಡೂರು ದೇವಾಲಯದ ಸಮಸ್ಯೆ...!

By

Published : Feb 24, 2020, 9:30 PM IST

ಮೈಸೂರು :ದೇವಾಲಯದ ಆದಾಯದ ವಿಚಾರದಲ್ಲಿ 2 ಗುಂಪುಗಳ ನಡುವೆ ಗ್ರಾಮದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಸಪ್ತದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಆದರೆ, ಇಂದು ತಹಶಿಲ್ದಾರ್‌ ಅವರ ಮಧ್ಯಸ್ಥಿಕೆಯಿಂದ ಈ ಸಮಸ್ಯೆ ಬಗೆಹರಿದಿದೆ. ದೇವಾಲಯಗಳಲ್ಲಿ ಎಂದಿನಂತೆ ಪೂಜೆ ಆರಂಭವಾಗಿದೆ.

ತಹಶೀಲ್ದಾರ್‌ರ ಮಧ್ಯಸ್ಥಿಕೆಯಿಂದ ಕೊನೆಗೂ ಬಗೆಹರಿದ ತಗಡೂರು ದೇವಾಲಯ ವಿವಾದ..

ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಸಪ್ತ ದೇವಾಲಯಗಳಲ್ಲಿ ಪೂಜೆ ಮಾಡುವ ಪೂಜಾರಿಗಳು ದೇವಾಲಯಕ್ಕೆ ಬರುವ ಆದಾಯದಲ್ಲಿ ಈವರೆಗೆ ಲೆಕ್ಕ ತೋರಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಕಿತ್ತಾಟವಾಗಿ ಸಪ್ತ ದೇವಾಲಗಳಿಗೂ ಬೀಗ ಹಾಕಿ ಶಿವರಾತ್ರಿ ಹಬ್ಬದ ದಿನವೂ ಪೂಜೆ ಸಲ್ಲಿಸಲು ಸಹ ಅವಕಾಶ ನೀಡಿರಲಿಲ್ಲ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಈ ಎಲ್ಲ ಸಮಸ್ಯೆಗಳನ್ನ ಬಗೆಹರಿಸಿದ್ದಾರೆ.

ದೇವಾಲಯದ ಬಾಗಿಲು ತೆರೆಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಪೂಜೆ ಆರಂಭವಾಗಿದೆ. ಹಾಗೆಯೇ ಇನ್ನೂ ಮುಂದೆ ಈ ತರಹದ ಕಿತ್ತಾಟಗಳು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನೂ ಸಹ ಪೋಲಿಸರು ನೀಡಿದ್ದಾರೆ.

ABOUT THE AUTHOR

...view details