ಮೈಸೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ವಾಮೀಜಿಗಳು ಪ್ರಸಾದದ ಬದಲು ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮಾಡುತ್ತಿದ್ದಾರೆ.
ದೇವಾಲಯದಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ - ಪ್ರಸಿದ್ಧ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಮಾಸ್ಕ್ ವಿತರಣೆ ನ್ಯೂಸ್
ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ವಾಮೀಜಿಗಳು ಪ್ರಸಾದದ ಬದಲು ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮಾಡುತ್ತಿದ್ದಾರೆ.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಾಸ್ಕ್ ವಿತರಣೆ
ಮೈಸೂರು ನಗರದ ಪ್ರಸಿದ್ಧ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಒಳಗೆ ಇರುವ ದತ್ತಾತ್ರೇಯ ಸ್ವಾಮಿ ದೇವಾಲದಲ್ಲಿ ಸ್ವತಃ ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳು ದೇವರಿಗೆ ಪೂಜೆ ಸಲ್ಲಿಸಿ, ಬಂದ ಭಕ್ತರಿಗೆ ಹಾಗೂ ದೇವಾಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಸಾದದ ಬದಲು ಮಾಸ್ಕ್ ವಿತರಿಸಿ, ಕೊರೊನಾ ವೈರಸ್ ಹಾಗೂ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸಿದರು.