ಮೈಸೂರು: ವಿವಿಧ ಕಾಮಗಾರಿಳ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣದಿಂದ ಹೋಗುವ ಹಾಗೂ ಆಗಮಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರದ್ದಾಗಿರುವ ರೈಲು ಸೇವೆಗಳು...
ಜೂ.21 ರಂದು ಮೈಸೂರಿನಿಂದ ಹೊರಡುವ ಮೈಸೂರು-ರಾಣೆಗುಂಟ ಎಕ್ಸ್‌ಪ್ರೆಸ್ ಸಂಚಾರ, ಜೂ. 22ರಂದು ರಾಣೆಗುಂಟದಿಂದ ಮೈಸೂರಿಗೆ ಬರುವ ರಾಣೆಗುಂಟ-ಮೈಸೂರು ಎಕ್ಸ್‌ಪ್ರೆಸ್ ಸಂಚಾರ, ಜೂ.16 ರಿಂದ 23 ರವರೆಗೆ ಚಾಮರಾಜನಗರದಿಂದ ಮೈಸೂರಿಗೆ ಬರುವ ಹಾಗೂ ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುವ ಪ್ಯಾಸೆಂಜರ್ ರೈಲು ಹಾಗೂ ಮೈಸೂರಿನಿಂದ ಯಶವಂತಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು ಸೇವೆ ರದ್ದಾಗಿದೆ.
ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಬರುವ ಹಾಗೂ ಹೋಗುವ ಪ್ಯಾಸೆಂಜರ್, ಮೈಸೂರಿನಿಂದ ತಾಳಗುಪ್ಪಕ್ಕೆ ಹೋಗುವ ಪ್ಯಾಸೆಂಜರ್, ಮೈಸೂರಿನಿಂದ ನಂಜನಗೂಡಿಗೆ ಹೋಗುವ ಹಾಗೂ ಬರುವ ಪ್ಯಾಸೆಂಜರ್, ಶಿವಮೊಗ್ಗ- ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್, ಸೇಲಂನಿಂದ ಯಶವಂತಪುರಕ್ಕೆ ಬರುವ ಪ್ಯಾಸೆಂಜರ್ ಹಾಗೂ ಯಶ್ವಂತಪುರದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್ ರೈಲು ಸಂಚಾರ ರದ್ದಾಗಿದೆ.
ಬೆಂಗಳೂರಿನಿಂದ ಅರಸೀಕೆರೆಗೆ ತೆರಳುವ ಪ್ಯಾಸೆಂಜರ್, ಮೈಸೂರು-ಯಲಹಂಕಗೆ ಹೋಗುವ ಹಾಗೂ ಬರುವ ಮಾಲ್ಗುಡಿ ಎಕ್ಸ್‌ಪ್ರೆಸ್, ಮೈಸೂರು-ಕೆಎಸ್‌ಆರ್ ಬೆಂಗಳೂರಿಗೆ ಹೋಗುವ-ಬರುವ ರಾಜ್ಯರಾಣಿ ಎಕ್ಸ್‌ಪ್ರೆಸ್, ಜೂ.17ರಿಂದ 24ರವರೆಗೆ ಸೇಲಂನಿಂದ ಯಶವಂತಪುರಕ್ಕೆ ಹೋಗುವ ಹಾಗೂ ಬರುವ ಪ್ಯಾಸೆಂಜರ್, ಯಶವಂತಪುರದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್, ಶಿವಮೊಗ್ಗದಿಂದ ಕೆಎಸ್‌ಆರ್ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್, ಅರಸೀಕೆರೆಯಿಂದ ಕೆಎಸ್‌ಆರ್ ಬೆಂಗಳೂರಿಗೆ ತೆರಳುವ, ತಾಳಗುಪ್ಪದಿಂದ ಮೈಸೂರಿಗೆ ಬರುವ ಪ್ಯಾಸೆಂಜರ್, ಕೆಎಸ್‌ಆರ್ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಬರುವ ಪ್ಯಾಸೆಂಜರ್ ರದ್ದು ಮಾಡಲಾಗಿದೆ.