ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರದ ಅನುದಾನದಿಂದ ಮಂಡಕಳ್ಳಿ ವಿಮಾನ ನಿಲ್ದಾಣ ಉನ್ನತೀಕರಣ:  ಪ್ರತಾಪ್​ ಸಿಂಹ - MP Pratap simha

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಂಟೀನ್, ಶೌಚಾಲಯ, ಸೆಲ್ಫಿ ಪಾಯಿಂಟ್ ಹಾಗೂ ಅತ್ಯಾಧುನಿಕ 5‌.50 ಕೋಟಿ ರೂ.ಗಳ ಅಗ್ನಿಶಾಮಕ ವಾಹನವನ್ನು ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆಗೊಳಿಸಿದರು.

mysore
ಪ್ರತಾಪ್​ ಸಿಂಹ

By

Published : Nov 10, 2020, 10:02 PM IST

Updated : Nov 10, 2020, 10:59 PM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಅನುದಾನ ಮುಖಾಂತರ ಉನ್ನತೀಕರಣಗೊಳಿಸಲಾಗಿದೆ ಎಂದು ಸಂಸದ ಪ್ರತಾಪ್​ ಸಿಂಹ ತಿಳಿಸಿದರು.

ಸಂಸದ ಪ್ರತಾಪ್​ ಸಿಂಹ

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಂಟೀನ್, ಶೌಚಾಲಯ, ಸೆಲ್ಫಿ ಪಾಯಿಂಟ್ ಹಾಗೂ ಅತ್ಯಾಧುನಿಕ 5‌.50 ಕೋಟಿ ರೂ.ಗಳ ಅಗ್ನಿಶಾಮಕ ವಾಹನವನ್ನು ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆಗೊಳಿಸಿ ನಂತರ ಮಾತನಾಡಿದ ಅವರು, ಕಳೆದ ಆರು ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಉಡಾನ್ ಯೋಜನೆ ಮುಖಾಂತರ ಬಡವರು ಸಹ ವಿಮಾನದಲ್ಲಿ ಹೋರಾಟ ನಡೆಸಲಿ ಎಂಬ ಉದ್ದೇಶದಿಂದ ದೇಶದ ಪ್ರಮುಖ ನಗರಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಕೋವಿಡ್ -19 ರ ನಂತರ ಎಂದಿನಂತೆ ಪ್ರಯಾಣಿಕರು ವಿಮಾನದಲ್ಲಿ ಹೋರಾಟ ನಡೆಸುತ್ತಿದ್ದಾರೆ ಮತ್ತೆ ವಿಮಾನ ಪ್ರಾಧಿಕಾರ ಚೇತರಿಕೆ ಕಂಡಿದೆ. ಮೈಸೂರು ವಿಮಾನ ನಿಲ್ದಾಣದಿಂದ ಈಗಾಗಲೇ 12 ಪ್ರದೇಶಗಳಿಗೆ ಸಂಚರಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ರನ್ ವೇ ವಿಸ್ತರಿಸಿ 50ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದೇ ಕೇಂದ್ರದ ಉದ್ದೇಶವಾಗಿದೆ ಎಂದು ತಿಳಿಸಿದರು.

Last Updated : Nov 10, 2020, 10:59 PM IST

ABOUT THE AUTHOR

...view details