ಮೈಸೂರು :ಎಣ್ಣೆ ಹೊಡೆಯುವಾಗ ಟೇಬಲ್ ಮೇಲೆ ಇಟ್ಟಿದ್ದ ಸಿಗರೇಟ್ ಅನ್ನು ಅನುಮತಿ ಇಲ್ಲದೆ ಸೇದಿದ ವಿಚಾರಕ್ಕೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್‌ವೊಂದರಲ್ಲಿ ಕಿರಣ್ ಎಂಬಾತ, ಆತನ ಚಿಕ್ಕಪ್ಪನ ಮಗ ಪ್ರಮೋದ್ ಹಾಗೂ ಸ್ನೇಹಿತರಾದ ರಾಕೇಶ್ ಹಾಗೂ ಮಹೇಶ್ ಎಂಬುವರ ಜೊತೆ ಸೇರಿ ಎಣ್ಣೆ ಹೊಡೆಯುತ್ತಿದ್ದರು.
ಆ ಸಂದರ್ಭದಲ್ಲಿ ಪ್ರಮೋದ್ ಸಿಗರೇಟ್ ಸೇದಿ ಟೇಬಲ್ ಮೇಲೆ ಇಟ್ಟಿದ್ದ. ಆ ಸಿಗರೇಟ್‌ನ ಕಿರಣ್ ತೆಗೆದುಕೊಂಡು ಒಂದು ಧಮ್ ಹೊಡೆದಿದ್ದಾನೆ. ಇದರಿಂದ ಸಿಟ್ಟಾದ ಪ್ರಮೋದ್, ಕಿರಣ್ಗೆ ಆವಾಜ್ ಹಾಕಿದ್ದಾನೆ. ಬೇಸರಗೊಂಡ ಕಿರಣ್ ಸಿಗರೇಟ್‌ನ ಎಸೆದು ಕೋಪ ತೀರಿಸಿಕೊಂಡಿದ್ದಾನೆ.