ಮೈಸೂರು: ಕಾಡಾನೆ ದಾಳಿಗೆ ಕೇರಳ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಸರಗೂರು ತಾಲೂಕಿನ ಎತ್ತಿಗೆ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ. ಬಾಲನ್ (60) ಆನೆ ದಾಳಿಗೆ ಬಲಿಯಾದ ರೈತ.
ಈತ ಎತ್ತಿಗೆ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದ. ಬೆಳಗ್ಗೆ ಜಮೀನಿನತ್ತ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸುವ ವೇಳೆ ದಾಳಿ ನಡೆಸಿದ ಆನೆ ಇವರನ್ನು ತುಳಿದು ಸಾಯಿಸಿದೆ ಎನ್ನಲಾಗ್ತಿದೆ.