ಮೈಸೂರು: ಕುತ್ತಿಗೆಗೆ ವೈಯರ್ ಬಿಗಿದು ಅಪರಿಚಿತ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ನಗರದ ಸಯ್ಯಾಜಿರಾವ್ ರಸ್ತೆಯ ಕಾಡಾ ಕಚೇರಿಯ ಕಾರಿಡಾರ್‌ನಲ್ಲಿ ನಡೆದಿದೆ. ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಕುತ್ತಿಗೆಗೆ ವೈಯರ್ ಬಿಗಿದು ಅಪರಿಚಿತ ವ್ಯಕ್ತಿಯ ಕೊಲೆ - ಮೈಸೂರು ಕತ್ತಿಗೆ ವೈಯರ್ ಬಿಗಿದು ಹತ್ಯೆ
ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕಾಡಾ ಕಚೇರಿಯ ಕಾರಿಡಾರ್‌ನಲ್ಲಿ ವ್ಯಕ್ತಿಯೊಬ್ಬನ ಕತ್ತಿಗೆ ವೈಯರ್ ಬಿಗಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಪರಿಚಿತ ವ್ಯಕ್ತಿಯ ಕೊಲೆ
ಮೇಲ್ನೋಟಕ್ಕೆ ಚಿಂದಿ ಆಯುವ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ಕತ್ತಿಗೆಗೆ ವೈಯರ್ ನಿಂದ ಬಿಗಿದಿರುವುದರಿಂದ ಕಿವಿ, ಮೂಗಿನಿಂದ ರಕ್ತಸ್ರಾವವಾಗಿದೆ. ಪೊಲೀಸರು ಕಾಡಾ ಕಚೇರಿಯಲ್ಲಿ ಹಾಕಲಾಗಿರುವ ಕಡತಕ್ಕೆ ಸಹಿ ಹಾಕಲು ಬಂದಾಗ ಶವ ಪತ್ತೆಯಾಗಿದೆ. ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.