ಚಾಮರಾಜನಗರ/ಮೈಸೂರು:ಕಬ್ಬಿನ ಗದ್ದೆಯಲ್ಲಿನ ಬೆಂಕಿ ನಂದಿಸಲು ತೆರಳಿದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಗಡಿ ಗ್ರಾಮ ಬಾಗಳಿಯ ಮಲ್ಲಿಕಾರ್ಜುನಸ್ವಾಮಿ (35) ಮೃತಪಟ್ಟಿರುವ ದುರ್ದೈವಿ. ಕಬ್ಬು ಕಟಾವಾದ ಬಳಿಕ ಹಾಕಿದ್ದ ಬೆಂಕಿ ಪಕ್ಕದ ಕಬ್ಬಿನ ಗದ್ದೆಗೆ ತಗುಲಿದ್ದರಿಂದ ನಂದಿಸಲು ಹೋಗಿದ್ದ ವ್ಯಕ್ತಿ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ.
ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ.. ಮೃತ ಮಲ್ಲಿಕಾರ್ಜುನಸ್ವಾಮಿ, ಟಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆಗೆ ಪಡೆದು ಕಬ್ಬು ಬೆಳೆದಿದ್ದರು. ಕಬ್ಬು ಕಟಾವಾದ ಬಳಿಕ ಕಬ್ಬಿನ ತರಗಿಗೆ ಬೆಂಕಿ ಹಚ್ಚಿದ್ದು, ಪಕ್ಕದ ಕಬ್ಬಿನ ಗದ್ದೆಗೆ ತಗುಲಿದ ಪರಿಣಾಮ ಗಾಬರಿಯಾದ ಮಲ್ಲಿಕಾರ್ಜುನಸ್ವಾಮಿ ಬೆಂಕಿ ನಂದಿಸುವ ವೇಳೆ ಈ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಮೂಗೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.