ಮೈಸೂರು: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯಿಂದ ಅವರ ತಲೆಯನ್ನೇ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ವರುಣ ಹೋಬಳಿಯ ಚಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ(40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ದೇವರಾಜು ಹತ್ಯೆ ಮಾಡಿದ ಪಾಪಿ ಪತಿಯಾಗಿದ್ದಾರೆ.
ದೇವರಾಜುಗೆ ಪುಟ್ಟಮ್ಮ 2ನೇ ಹೆಂಡತಿ. ಮೊದಲ ಹೆಂಡತಿಯನ್ನು ಕೊಲೆ ಮಾಡಲು ಯತ್ನಿಸಿದ್ದು, ಅವರೇ ದೇವರಾಜನಿಂದ ದೂರವಾಗಿದ್ದರಂತೆ. ಬಳಿಕ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನು ಎರಡನೇ ಮದುವೆ ಆಗಿದ್ದ ದೇವರಾಜುಗೆ 20 ವರ್ಷದ ಮಗಳೂ ಕೂಡಾ ಇದ್ದಾರೆ. ಆದರೂ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ನಿತ್ಯ ಗಲಾಟೆ ಮಾಡುತ್ತಿದ್ದನಂತೆ.