ಕರ್ನಾಟಕ

karnataka

ETV Bharat / city

ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯ ಪರಿಹಾರ ಹಣ ಎಗರಿಸಿದ ಆರೋಪಿ ಅಂದರ್! - man took rape victim compensation amount illegally

2021ರ ಏಪ್ರಿಲ್ 3ರಂದು ಆಕೆಯ ಖಾತೆಯಿಂದ 2.50 ಲಕ್ಷ ರೂ. ಗಳನ್ನು ನೆಫ್ಟ್‌ ಮೂಲಕ ತನ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಉಳಿದ ಹಣವನ್ನು ತನ್ನ ಬಳಿಯೇ ಇದ್ದ ಎಟಿಎಂ ಕಾರ್ಡ್‌ನಿಂದ ಹಂತ ಹಂತವಾಗಿ ಡ್ರಾ ಮಾಡಿಕೊಂಡಿದ್ದಾನೆ. ಜನವರಿ 17ರಂದು ಬಾಲಕಿಯ ತಾಯಿ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ಹಣ ಈಗಾಗಲೇ ಡ್ರಾ ಆಗಿರುವ ವಿಚಾರ ತಿಳಿದಿದೆ‌..

man arrested for illegally taking rape victim's compensation amount
ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯ ಪರಿಹಾರ ಹಣವನ್ನು ಎಗರಿಸಿದ ಆರೋಪಿ ಅಂದರ್

By

Published : Feb 8, 2022, 2:24 PM IST

ಮೈಸೂರು: ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತೆಗೆ (ಗಿರಿಜನ) 5 ಲಕ್ಷ ರೂ.ಗಳನ್ನು ಸರ್ಕಾರದಿಂದ ಪರಿಹಾರವಾಗಿ ನೀಡಲಾಗಿತ್ತು. ಆದ್ರೆ ಈ ಪರಿಹಾರ ಹಣವನ್ನು ಲಪಟಾಯಿಸಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಹುಣಸೂರು ತಾಲೂಕಿನ ಬಲ್ಲೇನಹಳ್ಳಿಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್​ ಸದಸ್ಯ ದಿ. ನಸರುಲ್ಲಾ ಷರೀಫ್ ಅವರ ಪುತ್ರ ಚಾಂದ್ ಪಾಷಾ ಎಂಬುವನೇ ಬಾಲಕಿಯ ಪರಿಹಾರ ಹಣ ಲಪಟಾಯಿಸಿರುವ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬಲ್ಲೇನಹಳ್ಳಿ ಗ್ರಾಮದ ಅಪ್ರಾಪ್ತೆಯೋರ್ವಳ ಮೇಲೆ ಆಕೆಯ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದ.‌ ಈ ಸಂಬಂಧ ಪ್ರಕಣ ದಾಖಲಾಗಿತ್ತು. 2019ರಲ್ಲಿ ಸಂತ್ರಸ್ತೆ ತಂದೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆತನನ್ನು ಜೈಲಿಗೆ ಕಳುಹಿಸಲಾಗಿದೆ.

ಈ ಸಂತ್ರಸ್ತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ.ಅನ್ನು 2020ರಲ್ಲಿ ಪರಿಹಾರವಾಗಿ ನೀಡಲಾಗಿತ್ತು. ಸಂತ್ರಸ್ತೆ ತಾಯಿ ಅನಕ್ಷರಸ್ಥೆಯಾಗಿರುವ ಕಾರಣ ಅವರನ್ನು ಸಂಪರ್ಕಿಸಿದ ಆರೋಪಿ ಚಾಂದ್ ಪಾಷಾ, ಬ್ಯಾಂಕ್​ನಲ್ಲಿ ಹಣವನ್ನು ಜಮೆ ಮಾಡಿಸುವುದಾಗಿ ಹೇಳಿ 2020ರ ಅಕ್ಟೋಬರ್‌ 15ರಂದು ಅವರ ಹೆಸರಿನಲ್ಲಿ ಖಾತೆ ತೆರzದು, ಹಣ ಹಾಕಿ ಪಾಸ್ ಬುಕ್ ಮತ್ತು ಎಟಿಎಂ ಕಾರ್ಡ್ ಪಡೆದು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಆ ಖಾತೆಗೆ ಪರಿಹಾರದ ಹಣ ಜಮೆ ಆಗಿತ್ತು.

2021ರ ಏಪ್ರಿಲ್ 3ರಂದು ಆಕೆಯ ಖಾತೆಯಿಂದ 2.50 ಲಕ್ಷ ರೂ. ಗಳನ್ನು ನೆಫ್ಟ್‌ ಮೂಲಕ ತನ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಉಳಿದ ಹಣವನ್ನು ತನ್ನ ಬಳಿಯೇ ಇದ್ದ ಎಟಿಎಂ ಕಾರ್ಡ್‌ನಿಂದ ಹಂತ ಹಂತವಾಗಿ ಡ್ರಾ ಮಾಡಿಕೊಂಡಿದ್ದಾನೆ. ಜನವರಿ 17ರಂದು ಬಾಲಕಿಯ ತಾಯಿ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ಹಣ ಈಗಾಗಲೇ ಡ್ರಾ ಆಗಿರುವ ವಿಚಾರ ತಿಳಿದಿದೆ‌.

ಇದನ್ನೂ ಓದಿ:ಅಮಿತ್ ಶಾ ಅಂಗಳದಿಂದ ನಡ್ಡಾ ಕಡೆ ತಲುಪಿದ ಸಂಪುಟ ಸರ್ಕಸ್: ಇಂದು ಸಂಜೆ ನಡೆಯುತ್ತೆ ಮಹತ್ವದ ಸಭೆ..!

ಈ ಸಂಬಂಧ ಬಾಲಕಿ ಹಾಗೂ ತಾಯಿ ಹುಣಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ‌. ಪೊಲೀಸರು ಚಾಂದ್ ಪಾಷಾನನ್ನು ಕರೆಸಿ ವಿಚಾರಿಸಿದ್ದಾರೆ. ಆತ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದ ಎನ್ನಲಾಗಿದೆ.

ಈವರೆಗೂ ಹಣವನ್ನು ಹಿಂತಿರುಗಿಸದೇ ಇದ್ದ ಹಿನ್ನೆಲೆ, ಚಾಂದ್ ಪಾಷಾನನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ABOUT THE AUTHOR

...view details