ಮೈಸೂರು: ಕೇಂದ್ರ ಸರ್ಕಾರ ದೆಹಲಿ ರೈತರ ಹೋರಾಟದ ಬಗ್ಗೆ ಲಘುವಾಗಿ ವರ್ತಿಸಿದ ಕಾರಣ ಪಶ್ಚಿಮ ಬಂಗಾಳದಲ್ಲಿ ರೈತರು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಸರ್ವಾಧಿಕಾರಿ ಆಡಳಿತ ನಡೆಸುವ ಬಿಜೆಪಿ ಪಕ್ಷಕ್ಕೆ ತಕ್ಕ ಎಚ್ಚರಿಕೆ ನೀಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೆಲುವು ದೇಶದ ರೈತರ ಗೆಲುವಾಗಿದೆ; ಕುರುಬೂರು
ಪ್ರಧಾನಿ ಮೋದಿ ಇನ್ನಾದರೂ ಎಚ್ಚೆತ್ತುಕೊಂಡು, ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದು, ದೇಶದ ರೈತರ ಹೋರಾಟದ ಬಗ್ಗೆ ಗಂಭೀರವಾಗಿ ಗಮನ ಹರಿಸಲಿ. ದೇಶದ ಜನರಿಗೆ ಸುಳ್ಳಿನ ಸರಮಾಲೆಗಳ ಟೋಪಿ ಹಾಕುವ ಕಲೆಯನ್ನು ಬಿಟ್ಟು ನೈಜ ಆಡಳಿತ ನಡೆಸುವಂತಾಗಲಿ ಎಂದು ಕುರುಬೂರು ಶಾಂತಕುಮಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಇನ್ನಾದರೂ ಎಚ್ಚೆತ್ತುಕೊಂಡು, ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದು, ದೇಶದ ರೈತರ ಹೋರಾಟದ ಬಗ್ಗೆ ಗಂಭೀರವಾಗಿ ಗಮನ ಹರಿಸಲಿ. ದೇಶದ ಜನರಿಗೆ ಸುಳ್ಳಿನ ಸರಮಾಲೆಗಳ ಟೋಪಿ ಹಾಕುವ ಕಲೆಯನ್ನು ಬಿಟ್ಟು ನೈಜ ಆಡಳಿತ ನಡೆಸುವಂತಾಗಲಿ ಎಂದಿದ್ದಾರೆ.
ಇನ್ನಾದರೂ ದಿಲ್ಲಿಯಲ್ಲಿ 150 ದಿನದಿಂದ ಹೋರಾಟ ನಡೆಸುತ್ತಿರುವ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ. ರಾಜ್ಯದಲ್ಲಿ ಕೊರೂನಾ ಕರ್ಫ್ಯೂ ಜಾರಿ ಮಾಡಿದ ಕಾರಣ ರೈತರ ಕೃಷಿ ಉತ್ಪನ್ನಗಳಾದ ಹಣ್ಣು-ತರಕಾರಿ ಖರೀದಿ ನಿಂತುಹೋಗಿದೆ. ರೈತರು ಹೊಲದಲ್ಲಿ ಕಟಾವು ಮಾಡದ್ದರಿಂದ ಹಾಗೂ ಕಟಾವು ಮಾಡಿ ಮಾರುಕಟ್ಟೆಗೆ ತಂದರೂ ಖರೀದಿದಾರರು ಇಲ್ಲದೆ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕುರುಬೂರು ಶಾಂತಕುಮಾರ ಹೇಳಿದ್ದಾರೆ.