ಮೈಸೂರು:ಮಹಾರಾಜ ಕ್ರಿಕೆಟ್ ಟ್ರೋಫಿಯಲ್ಲಿ ಆಡುವ ಮೈಸೂರು ವಾರಿಯರ್ಸ್ ತಂಡ ಆಲ್ರೌಂಡರ್ ಟೀಮ್ ಆಗಿದೆ ಎಂದು ತಂಡದ ನಾಯಕ ಕರುಣ್ ನಾಯರ್ ಪ್ರತಿಕ್ರಿಯಿಸಿದರು. ಖಾಸಗಿ ಹೋಟೆಲ್ನಲ್ಲಿ ತಂಡದ ಆಟಗಾರರ ಪರಿಚಯ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಈ ಟೀಂ ಚೆನ್ನಾಗಿದೆ. ಇದರ ಭಾಗವಾಗಿರುವುದಕ್ಕೆ ಸಂತೋಷವಾಗುತ್ತದೆ. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ರೀತಿಯಲ್ಲೂ ತಂಡ ಉತ್ತಮವಾಗಿದೆ" ಎಂದರು.
ಮೈಸೂರು ವಾರಿಯರ್ಸ್ ಆಲ್ರೌಂಡರ್ ತಂಡ: ಕ್ಯಾಪ್ಟನ್ ಕರುಣ್ ನಾಯರ್ ಮೆಚ್ಚುಗೆ
ಆಗಸ್ಟ್ 7ರಿಂದ ಮಹಾರಾಜ ಕಪ್ ಕ್ರಿಕೆಟ್ ಆರಂಭವಾಗಲಿದೆ. ಪಂದ್ಯಗಳು ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.
ಮಹಾರಾಜ ಕಪ್
ಆಗಸ್ಟ್ 7 ರ ಭಾನುವಾರ ಮೈಸೂರಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮೊದಲ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಮೈಸೂರಿನಲ್ಲಿ 18 ಪಂದ್ಯಗಳು ನಡೆಯಲಿದ್ದು ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.
ಇದನ್ನೂ ಓದಿ :ನಾಳೆಯಿಂದ ಪ್ರೊ ಕಬಡ್ಡಿ ಲೀಗ್ ಹರಾಜು: ಯಾರ ಪಾಲಾಗ್ತಾರೆ ಬುಲ್ಸ್ನ ಪವನ್ ಶೆರಾವತ್?