ಕರ್ನಾಟಕ

karnataka

ETV Bharat / city

ಮೈಸೂರು ಚಾಮುಂಡಿ ಬೆಟ್ಟದ ನಂದಿಗೆ ಮಹಾಮಜ್ಜನ... - ಮೈಸೂರು

ಕೋವಿಡ್ ಕಾರಣದಿಂದ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿಬೆಟ್ಟದ ನಂದಿಗೆ ಇಂದು ಮಹಾಮಜ್ಜನ(Mahamajjana for Chamundi hill Nandi) ನೆರವೇರಿಸಲಾಯಿತು.

Mahamajjana for Mysore Chamundi Hill Nand
ಚಾಮುಂಡಿ ಬೆಟ್ಟದ ನಂದಿಗೆ ಮಹಾಮಜ್ಜನ

By

Published : Nov 21, 2021, 12:28 PM IST

Updated : Nov 21, 2021, 12:38 PM IST

ಮೈಸೂರು:ಚಾಮುಂಡೇಶ್ವರಿ ಬೆಟ್ಟದಲ್ಲಿರುವ ನಂದಿಗೆ ಇಂದು ಮಹಾಮಜ್ಜನ(Mahamajjana for Chamundi hill Nandi) ನೆರವೇರಿಸಲಾಯಿತು.

ಮೈಸೂರು ಚಾಮುಂಡಿ ಬೆಟ್ಟದ ನಂದಿಗೆ ಮಹಾಮಜ್ಜನ...

ಚಾಮುಂಡಿ ಬೆಟ್ಟದ ನದಿ ಬಳಗದಿಂದ ಏರ್ಪಡಿಸಿದ್ದ 16ನೇ ವರ್ಷದ ಮಹಾಮಸ್ತಕಾಭಿಷೇಕವನ್ನ ಕೋವಿಡ್ ಕಾರಣದಿಂದ ಸರಳ ಹಾಗೂ ಸಂಪ್ರದಾಯಿಕವಾಗಿ ಆಚರಿಸಲಾಯಿತು.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರನೇ ಭಾನುವಾರ ನಡೆಯುವ ನಂದಿ ಅಭಿಷೇಕಕ್ಕೆ, ಹಾಲು, ತುಪ್ಪ, ಅರಿಶಿಣ, ಕುಂಕುಮ, ಎಳನೀರು ಹಾಗು ಜೇನುತುಪ್ಪ ಸೇರಿದಂತೆ 38 ದ್ರವ್ಯಗಳಿಂದ ಮಜ್ಜನ ಮಾಡಲಾಯಿತು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಭಿಷೇಕ ನೆರವೇರಿತು. ಅಭಿಷೇಕದ ನಂತರ ನಂದಿಗೆ ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಇದನ್ನೂ ಓದಿ:ಮದುಮಗನಿಂದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಮತದಾನ

Last Updated : Nov 21, 2021, 12:38 PM IST

ABOUT THE AUTHOR

...view details