ಮೈಸೂರು:ದಕ್ಷಿಣ ಕಾಶಿಯೆಂದು ಖ್ಯಾತಿಗಳಿಸಿರುವ ನಂಜನಗೂಡಿನ ಕಪಿಲೆ ಶುದ್ಧವಾಗಿ ಹರಿಯುತ್ತಿದ್ದಾಳೆ.
ಲಾಕ್ಡೌನ್ ಎಫೆಕ್ಟ್.. ಸ್ವಚ್ಛಂದವಾಗಿ ಹರಿಯುತ್ತಿದ್ದಾಳೆ ಕಪಿಲೆ
ದಕ್ಷಿಣ ಕಾಶಿಯೆಂದು ಖ್ಯಾತಿಗಳಿಸಿರುವ ನಂಜನಗೂಡಿನ ಕಪಿಲಾ ನದಿಯ ಬಳಿ ಭಕ್ತಾದಿಗಳು ಸುಳಿಯದೇ ಇರುವುದರಿಂದ ನದಿ ಶುದ್ಧವಾಗಿ ಕಂಗೊಳಿಸುತ್ತಿದೆ.
ಲಾಕ್ಡೌನ್ ಎಫೆಕ್ಟ್..ಸ್ವಚ್ಛಂದವಾಗಿ ಹರಿಯುತ್ತಿದ್ದಾಳೆ ಕಪಿಲೆ
ಲಾಕ್ಡೌನ್ ಘೋಷಣೆಯಾದ ಬಳಿಕ ದೇವಾಲಯಗಳ ಬಾಗಿಲು ಕೂಡ ಬಂದ್ ಆಗಿವೆ. ಹೀಗಾಗಿ ನಂಜನಗೂಡಿನಲ್ಲಿ ಕಪಿಲೆ ಸ್ವಚ್ಛಂದವಾಗಿ ಹರಿಯುತ್ತಿದ್ದಾಳೆ. ಲಾಕ್ಡೌನ್ ಘೋಷಣೆಯಾಗುವ ಮುನ್ನ ದೇವಾಲಯಕ್ಕೆ ಸಾವಿರಾರು ಭಕ್ತರು ಬರುತ್ತಿದ್ದರು. ಅವರಲ್ಲನೇಕರು ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಟ್ಟೆಗಳನ್ನು ನದಿಗೆ ಬಿಸಾಡಿ ಹೋಗುತ್ತಿದ್ದರು. ಇದರಿಂದಾಗಿ ನದಿಯಲ್ಲಿ ಬಟ್ಟೆ ಹಾಗೂ ಇನ್ನಿತರ ಕಲ್ಮಶಗಳು ಸಂಗ್ರಹಗೊಂಡು ನದಿ ಮಲಿನವಾಗುತ್ತಿತ್ತು.
ಆದರೀಗ ಒಂದು ತಿಂಗಳಿನಿಂದ ಕಪಿಲಾ ನದಿಯ ಬಳಿ ಭಕ್ತಾದಿಗಳು ಸುಳಿಯದೇ ಇರುವುದರಿಂದ ನದಿ ಶುದ್ಧವಾಗಿ ಕಂಗೊಳಿಸುತ್ತಿದೆ.