ಮೈಸೂರು:ಪಠ್ಯಪುಸ್ತಕದಿಂದ ಭಗತ್ ಸಿಂಗ್ ಮತ್ತು ನಾರಾಯಣಗುರು ಅವರ ಪಠ್ಯವನ್ನು ಕೈಬಿಟ್ಟಿಲ್ಲ. ಕಾಂಗ್ರೆಸ್ ವಿನಾಕಾರಣ ಈ ವಿಚಾರದಲ್ಲಿ ವಿವಾದ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಕಾಂಗ್ರೆಸ್‌ಗೆ ದಿಢೀರನೆ ಭಗತ್ ಸಿಂಗ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಬಂತೋ ಗೊತ್ತಾಗುತ್ತಿಲ್ಲ. ಭಗತ್ ಸಿಂಗ್ ಪಠ್ಯ ಮುಂದುವರೆದಿದೆ. ನಾರಾಯಣಗುರು ಅವರ ಪಠ್ಯ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ವರ್ಗಾವಣೆಯಾಗಿದೆ ಎಂದರು.
ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ.ಹೆಗಡೆವಾರ್ ಅವರ ಪಠ್ಯ ಯಾಕಿರಬಾರದು. ಅವರು ದೇಶಪ್ರೇಮದ ಬಗ್ಗೆ ಮಾಡಿದ ಭಾಷಣ ಮಕ್ಕಳಿಗೆ ಸ್ಪೂರ್ತಿಯಾಗಲು ಪಠ್ಯದಲ್ಲಿ ಅಳವಡಿಸಿದ್ದೇವೆ. ಅದರಲ್ಲಿ ತಪ್ಪೇನಿದೆ?. ಚಕ್ರವರ್ತಿ ಸೂಲಿಬೆಲೆ ಒಬ್ಬ ಶ್ರೇಷ್ಠ ವಾಗ್ಮಿ. ಅವರು ರಚಿಸಿದ ಪಠ್ಯ ಮಕ್ಕಳಲ್ಲಿ ದೇಶಭಕ್ತಿ ತುಂಬಲಿದೆ. ಇದರಲ್ಲೂ ಕಾಂಗ್ರೆಸ್‌ನವರು ತಪ್ಪು ಹುಡುಕುವುದು ಹೇಗೆ? ಎಂದು ಕೇಳಿದರು.