ಮೈಸೂರು :ಎರಡು ಮರಿಗಳೊಂದಿಗೆ ಚಿರತೆ ಬೋನಿಗೆ ಬಿದ್ದಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಮೈಸೂರು : 2 ಮರಿಗಳೊಂದಿಗೆ ಬೋನಿಗೆ ಬಿದ್ದ ಚಿರತೆ - ಚಿರತೆ ಸೆರೆ
ಸೆರೆ ಸಿಕ್ಕ ಚಿರತೆ ಮರಿಗಳನ್ನು ನಾಗರಹೊಳೆ ಕಾಡಿಗೆ ಬಿಡಲಾಗಿದೆ. ಬೀಚನಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿ ಇರುವುದರಿಂದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು..
ಮರಿಗಳೊಂದಿಗೆ ಬೋನಿಗೆ ಬಿದ್ದ ಚಿರತೆ
ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿ ಇರುವ ಪಾಳು ಬಿದ್ದ ನೀರಾವರಿ ಇಲಾಖೆಯ ವರ್ಕ್ ಶಾಪ್ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಎರಡು ಮರಿಗಳೊಂದಿಗೆ ಚಿರತೆ ಸೆರೆಯಾಗಿದೆ.
ಸೆರೆ ಸಿಕ್ಕ ಚಿರತೆ ಮರಿಗಳನ್ನು ನಾಗರಹೊಳೆ ಕಾಡಿಗೆ ಬಿಡಲಾಗಿದೆ. ಬೀಚನಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿ ಇರುವುದರಿಂದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು.