ಮೈಸೂರು: ಕಳೆದ ಎರಡು ತಿಂಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದ ಚಿರತೆಯೊಂದು ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಕೊನೆಗೂ ಬಿದ್ದಿದೆ.
ಎರಡು ತಿಂಗಳು ಕಾಡಿಸಿ ಕೊನೆಗೂ ಬೋನಿಗೆ ಬಿದ್ದ ಚಿರತೆ.. ನಿಟ್ಟುಸಿರು ಬಿಟ್ಟ ಜನತೆ - ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮ
ಕಳೆದ ಎರಡು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಬಿದ್ದಿದೆ.
ಚಿರತೆ ಸೆರೆ
ಗ್ರಾಮದ ರೈತರಾದ ಸಿದ್ದರಾಜು ಹಾಗೂ ದೇವರಾಜು ಎಂಬುವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ಎರಡು ತಿಂಗಳಿನಿಂದ ದಾಳಿ ನಡೆಸುತ್ತಿದ್ದ ಈ ಚಿರತೆ, ಕುರಿ, ಕೋಳಿ, ನಾಯಿ, ಮೇಕೆಗಳನ್ನು ಕೊಂದು ಹಾಕಿತ್ತು. ಕೊನೆಗೂ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಮತ್ತಷ್ಟು ಚಿರತೆಗಳಿವೆ. ಅವುಗಳನ್ನು ಸಹ ಸೆರೆ ಹಿಡಿಯಿರಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.