ಕರ್ನಾಟಕ

karnataka

ETV Bharat / city

ಜುಬಿಲಿಯೆಂಟ್​ ಕಾರ್ಖಾನೆಗೆ ಲೀಗಲ್​​ ನೋಟಿಸ್ ನೀಡಲಾಗಿದೆ: ಸಚಿವ ವಿ.ಸೋಮಣ್ಣ - ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಇರುವ ಜುಬಿಲಿಯೆಂಟ್​ ಕಾರ್ಖಾನೆಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದ್ದು, ಜುಬಿಲಿಯೆಂಟ್​​​ ಔಷಧಿ ಕಂಪನಿಗೆ ಕಾರಣ ಕೇಳಿ ಲೀಗಲ್ ನೋಟಿಸ್​ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Legal Notice to Jubilant Factory: Minister V. Somanna
ಜುಬಿಲೇಂಟ್ ಕಾರ್ಖಾನೆಗೆ ಲೀಗಲ್ ನೋಟಿಸ್ ನೀಡಲಾಗಿದೆ :ಸಚಿವ ವಿ.ಸೋಮಣ್ಣ

By

Published : Apr 9, 2020, 6:31 PM IST

ಮೈಸೂರು: ಜುಬಿಲಿಯೆಂಟ್​​ ಕಾರ್ಖಾನೆಗೆ ಈಗಾಗಲೇ ಲೀಗಲ್ ನೋಟಿಸ್ ನೀಡಾಲಾಗಿದ್ದು, ಈ ಕಾರ್ಖಾನೆಯ ಬಗ್ಗೆ ಮುಖ್ಯಮಂತ್ರಿಗೆ ಸಂಪೂರ್ಣ ವರದಿ ನೀಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಜುಬಿಲಿಯೆಂಟ್​​ ಕಾರ್ಖಾನೆಗೆ ಲೀಗಲ್ ನೋಟಿಸ್ ನೀಡಲಾಗಿದೆ: ಸಚಿವ ವಿ.ಸೋಮಣ್ಣ

ಇಂದು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಇರುವ ಜುಬಿಲಿಯೆಂಟ್​​ ಕಾರ್ಖಾನೆಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಜುಬಿಲಿಯೆಂಟ್​​ ಔಷಧಿ ಕಂಪನಿಗೂ ಕಾರಣ ಕೇಳಿ ಲೀಗಲ್ ನೋಟಿಸ್​ಅನ್ನ ಜಿಲ್ಲಾಡಳಿತದಿಂದ ನೀಡಲಾಗಿದೆ. ಯಾರು ಎಷ್ಟು ದೊಡ್ಡವರಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.

ಇನ್ನು, ಜುಬಿಲಿಯೆಂಟ್​​ ಕಂಪನಿಯ ಪುನರ್ ಆರಂಭಕ್ಕೆ ಪ್ರಭಾವ ಹಾಗೂ ಒತ್ತಡ ತರಲಾಗುತ್ತಿದೆ ಎಂಬ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಸ್ತುಸ್ಥಿತಿ ನೋಡಿ ಮಾತನಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಖಾನೆಯ ಕಾರ್ಮಿಕರ ಹಿತದೃಷ್ಟಿ ನೋಡಿ ಮಾತನಾಡಬೇಕಾಗಿದೆ. ಜುಬಿಲಿಯೆಂಟ್​​ ಕಾರ್ಖಾನೆಯ ನೌಕರರು ಸೋಂಕಿನಿಂದ ಹೊರ ಬಂದ ನಂತರ ಬೇರೆ ವಿಚಾರ ಚರ್ಚೆ ಮಾಡೋಣ ಎಂದರು.

ಇನ್ನು ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಒಟಿಪಿ ನಂಬರ್ ಬರಲು ಕೆಲವು ಕಡೆ ತಾಂತ್ರಿಕ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಇನ್ನು ಮುಂದೆ ಕಾರ್ಡುದಾರರ ಮೊಬೈಲ್ ಸಂಖ್ಯೆ ಬರೆದು 2 ತಿಂಗಳ ಅಕ್ಕಿ ನೀಡುವಂತೆ ತಿಳಿಸಲಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರು.

ABOUT THE AUTHOR

...view details