ಮೈಸೂರು: ವಿಶ್ವನಾಥ್ ಅವರು ಮುಂಬೈನ ಹೋಟಲ್ನಲ್ಲಿ ತಂಗಿದ್ದಾಗ ಮಾಧ್ಯಮಗಳಿಗೆ ನನಗೆ ಸಾಲ ಇದೆ ಎಂದು ಹೇಳಿದ್ದರು. ಆದರೆ, ನಾಮಪತ್ರದಲ್ಲಿ ಕೋಟಿ ಆಸ್ತಿ ಇದೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಗ್ರಹಿಸಿದರು.
ನಾನು ದುರ್ಯೋಧನ ಒಕೆ, ಆದ್ರೆ ದುಶ್ಯಾಸನ ಅಲ್ಲ: ವಿಶ್ವನಾಥ್ಗೆ ಸಾ.ರಾ.ಮಹೇಶ್ ತಿರುಗೇಟು - Karnataka political developments
ಮಾಜಿ ಸಚಿವ ಸಾ.ರಾ.ಮಹೇಶ್ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಾ.ರಾ.ಮಹೇಶ್ ವಾಗ್ದಾಳಿ
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣಾ ಪ್ರಚಾರದಲ್ಲಿ ದೇವೇಗೌಡರ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತೇನೆ ಎನ್ನುತ್ತಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಎಂದು ಹೇಳುತ್ತಾ ಮತದಾರರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಾರೆ ಎಂದು ಎಂದು ಟೀಕಿಸಿದರು.
ನನ್ನನ್ನು ದುರ್ಯೋಧನ ಎಂದಿದ್ದಾರೆ. ದುರ್ಯೋಧನ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ದುಶ್ಯಾಸನ ಅಲ್ಲ. ಯಾರು ಒಳ್ಳೆಯವರು ಎಂಬುದು ಚುನಾವಣಾ ಫಲಿತಾಂಶದ ಬಳಿಕ ತಿಳಿಯಲಿದೆ ಎಂದು ಹೆಚ್.ವಿಶ್ವನಾಥ್ಗೆ ತಿರುಗೇಟು ನೀಡಿದರು.