ಮೈಸೂರು:ರಾಜ್ಯದಲ್ಲಿ ಮುಕ್ತ ಹಾಗೂ ದೂರಶಿಕ್ಷಣವನ್ನು ನಡೆಸುವ ಏಕಮಾತ್ರ ವಿಶ್ವವಿದ್ಯಾಲಯವನ್ನಾಗಿ ಕೆಎಸ್ಒಯು ಕಾಯ್ದೆಗೆ ತಿದ್ದುಪಡಿ ತಂದ ಸರ್ಕಾರಕ್ಕೆ ಮುಕ್ತ ವಿವಿಯ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ.
ಮುಕ್ತ ದೂರಶಿಕ್ಷಣ ನಡೆಸುವ ಏಕಮಾತ್ರ ವಿವಿ ಕೆಎಸ್ಒಯು: ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ
1996ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಮುಕ್ತ ವಿವಿ ಈಗ, ದೂರಶಿಕ್ಷಣ ನೀಡುವ ಏಕಮಾತ್ರ ವಿವಿ ಎಂಬ ಮಾನ್ಯತೆಯನ್ನು ಕಾಯ್ದೆಯ ಮೂಲಕ ಪಡೆದಿದೆ ಎಂದು ಮುಕ್ತ ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಹೇಳಿದ್ದಾರೆ.
ಮುಕ್ತ-ದೂರಶಿಕ್ಷಣ ನಡೆಸುವ ಏಕಮಾತ್ರ ವಿವಿ ಕೆಎಸ್ಒಯು: ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, 1996ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಮುಕ್ತ ವಿವಿ ಈಗ, ದೂರಶಿಕ್ಷಣ ನೀಡುವ ಏಕಮಾತ್ರ ವಿವಿ ಎಂಬ ಮಾನ್ಯತೆಯನ್ನು ಕಾಯ್ದೆಯ ಮೂಲಕ ಪಡೆದಿದೆ. ಇದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ವರ್ಷ ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ನೋಂದಾವಣೆಗೊಂಡಿದ್ದಾರೆ. ಜೊತೆಗೆ ವಿಜ್ಞಾನಕ್ಕೆ ಸಂಬಂಧಿಸಿದ 10 ಕೋರ್ಸ್ಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.