ಮೈಸೂರು:ಸರ್ವೇ ನಂ. 98ರ ಮುಡಾ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾ.ರಾ.ಮಹೇಶ್ ಕನ್ವೆನ್ಷಲ್ ಹಾಲ್ ಕಟ್ಟಿದ್ದಾರೆ ಎಂಬ ಮಾಹಿತಿ ಇದೆ. ಒತ್ತುವರಿಯಾಗಿದ್ದರೆ ಸರ್ಕಾರಕ್ಕೆ ಕನ್ವೆನ್ಷನ್ ಹಾಲ್ ನೀಡುತ್ತೇನೆ ಎಂಬ ಹೇಳಿಕೆಗೆ ಸಾ.ರಾ.ಮಹೇಶ್ ಬದ್ಧರಾಗಿರಬೇಕು ಎಂದು ಕರ್ನಾಟಕ ರಾಜ್ಯ ಹಿಂದುಗಳ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಹೇಳಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ವೇ ನಂಬರ್ 98 ಮೂಡ ಸ್ವತ್ತು ಎಂಬ ದಾಖಲೆ ಇದೆ. ಇಲ್ಲಿ ಒತ್ತುವರಿ ಮಾಡಿಕೊಂಡು ಸಾ.ರಾ.ಮಹೇಶ್ ಕನ್ವೆನ್ಷನ್ ಹಾಲ್ ಕಟ್ಟಿದ್ದಾರೆ. ಒತ್ತುವರಿಯಾಗಿದ್ದರೆ ಸರ್ಕಾರಕ್ಕೆ ಜಾಗ ಕೊಡುವುದಾಗಿ ಅವರು ಪ್ರತಿಭಟನೆ ವೇಳೆ ಹೇಳಿದ್ದರು. ಆದರೆ, ಒತ್ತುವರಿ ಮಾಡಿ, ಕನ್ವೆನ್ಷನ್ ಹಾಲ್ ಕಟ್ಟಲಾಗಿದೆ ಎಂಬ ಮಾಹಿತಿ ಇರುವುದರಿಂದ ಅವರು ಹೇಳಿದ ಮಾತಿನಂತೆ ನಡೆದುಕೊಳ್ಳಲಿ ಎಂದು ತಿಳಿಸಿದರು.