ಮೈಸೂರು :ಮೈಸೂರು ಅಭಿವೃದ್ಧಿ ವಿಚಾರವಾಗಿ, ಸಂಸದ ಪ್ರತಾಪಸಿಂಹರ ಜೊತೆ ಬಹಿರಂಗವಾಗಿ ಚರ್ಚಿಸಲು, ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಡೇಟ್ ಫಿಕ್ಸ್ ಮಾಡಿ, ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 29ರಂದು ಮಧ್ಯಾಹ್ನ 12ರ ವೇಳೆಗೆ ಜಲದರ್ಶಿನಿಯಲ್ಲಿರುವ ಸಂಸದರ ಕಚೇರಿ ಮುಂದೆ, ಒಂದು ಕುರ್ಚಿ, ಎರಡು ಟೇಬಲ್ ತೆಗೆದುಕೊಂಡು ನಾನೊಬ್ಬನೇ ಹೋಗುತ್ತಾನೆ. ದಾಖಲಾತಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಪ್ರತಾಪಸಿಂಹ ಅವರೇ ನೀವು ಪಟಾಲಂ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ.
ಸ್ವಂತ ವರ್ಚಸ್ಸಿನ ಮೇಲೆ ಇಬ್ಬರು ಗ್ರಾಪಂ ಚುನಾವಣೆಗೆ ಸ್ಪರ್ಧಿಸೋಣ. ಯಾರು ಗೆಲ್ಲುತ್ತಾರೋ ನೋಡೋಣ. ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಾಂಗ್ರೆಸ್ನ ಮುಖಂಡರು ಮಾತನಾಡುತ್ತಾರೆ. ಅದಕ್ಕೆಲ್ಲ ಮೋದಿ - ಅಮಿತ್ ಶಾ ಸುದ್ದಿಗೋಷ್ಠಿಯಲ್ಲಿ ಉತ್ತರ ಕೊಡುತ್ತಾರೆಯೇ? ಮಾಧ್ಯಮ ವಕ್ತಾರರು ಉತ್ತರ ಕೊಡುತ್ತಾರೆ. ಅದೇ ರೀತಿ ನನಗೆ ವಕ್ತಾರರನ್ನಾಗಿ ಮಾಡಲಾಗಿದೆ. ನಾನೇ ನಿಮಗೆ ಉತ್ತರ ಕೊಡುತ್ತೇನೆ. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಬೇಕಿಲ್ಲ ಎಂದು ಕಿಡಿಕಾರಿದರು.