ಕರ್ನಾಟಕ

karnataka

ETV Bharat / city

ಕಟೀಲ್ 'ಜೋಕರ್' ರೀತಿ ಮಾತನಾಡುತ್ತಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಾಂಬೆಗೆ ಹೋದವರಿಗೆ ಒಂದು ನಿಮಿಷವೂ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಎಲ್ಲ ತರಹದ ಡ್ಯಾನ್ಸ್ ನೋಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ನಿಮ್ಮ ಪಕ್ಷದ ಹಿರಿಯ ವಿಶ್ವನಾಥ್ ಅವರನ್ನೇ ಕೇಳಿ, ಬಾಂಬೆ ಡೈರೀಸ್ ರೈಟರ್ ಅವರೇ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.

KPCC spokesperson M Laxman talk
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

By

Published : Mar 9, 2021, 10:23 PM IST

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೋಕರ್ ರೀತಿ ಮಾತನಾಡುತ್ತಾರೆಂದು‌ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ಮಾಡಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್​​​

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಒಳ್ಳೆದ್ದಕ್ಕೂ, ಕೆಟ್ಟದ್ದಕ್ಕೂ, ಮಕ್ಕಳಾಗಿದ್ದಕ್ಕೂ ಎಲ್ಲಕ್ಕೂ ಕಾಂಗ್ರೆಸ್ ಹೊಣೆ ಮಾಡುತ್ತೀರಾ. ನೀವು ಒಬ್ಬ ಬಿಜೆಪಿ ಅಧ್ಯಕ್ಷರಾ? ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತು ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿಯವರು ಕುಮಾರಸ್ವಾಮಿಯವರಿಗೆ ಧನ್ಯವಾದ ಹೇಳಿದ್ದಾರೆ. ಅವರಿಗೆ ಏಕೆ ಧನ್ಯವಾದ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನೀವು ತಪ್ಪು ಮಾಡಿಲ್ಲ ಎಂದರೆ ಏಕೆ ಹೆದರುತ್ತೀರಿ? ಇದರ ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲಾ ಬಿಜೆಪಿಯವರದ್ದೇ. ಅದರ ಕುರಿತಾಗಿ ಸಿನಿಮಾ ಹಿನ್ನೆಲೆಯುಳ್ಳ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಅವರನ್ನ ಕೇಳಿದರೆ ಸಿಡಿಯ ಹಿಂದೆ ಯಾರಿದ್ದಾರೆ ಎಂದು ಹೇಳುತ್ತಾರೆ.

ಬಾಂಬೆಗೆ ಹೋದವರಿಗೆ ಒಂದು ನಿಮಿಷವೂ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಎಲ್ಲ ತರಹದ ಡ್ಯಾನ್ಸ್ ನೋಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ನಿಮ್ಮ ಪಕ್ಷದ ಹಿರಿಯ ವಿಶ್ವನಾಥ್ ಅವರನ್ನೇ ಕೇಳಿ, ಬಾಂಬೆ ಡೈರೀಸ್ ರೈಟರ್ ಅವರೇ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.

ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ 24 ಗಂಟೆಯಲ್ಲಿ ಈ ಪ್ರಕರಣದ ಅಸಲಿ ಕಥೆಯನ್ನು ಬಯಲಿಗೆ ಎಳೆದು ತರುತ್ತಾರೆ. ಸಿ.ಪಿ.ಯೋಗೇಶ್ವರ್ ಬಳಿಯೇ ಸಿಡಿ ಇವೆ ಅಂತಾ ಹೇಳುತ್ತಾರೆಂದು ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ABOUT THE AUTHOR

...view details