ಮೈಸೂರು: ಮೇಕೆದಾಟು ಹೋರಾಟಕ್ಕೆ ಪ್ರತಿರೋಧ ಕೇಳಿಬರುತ್ತಿವೆ. ಎಲ್ಲ ರೀತಿಯ ಟೀಕೆಗಳನ್ನೂ ನಾವು ಜೀರ್ಣಿಸಿಕೊಳ್ಳುತ್ತಿದ್ದು, ಎಲ್ಲರಿಗೂ ಸ್ವಾಗತ ಕೋರಿದ್ದೇನೆ. ಯಾವುದೇ ಪಕ್ಷದವರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ರಾಜ್ಯದ ನೆಲ, ಜಲದ ವಿಚಾರವಾಗಿ ನಾವು ಹೋರಾಟ ಕೈಗೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನಿಂದ ಕೈಗೊಳ್ಳಲಾಗುತ್ತಿರುವ ಪಾದಯಾತ್ರೆ ಕುರಿತಂತೆ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಮಾಧ್ಯಮಗೋಷ್ಠಿ ನಡೆಸಿದರು. ಪಾದಯಾತ್ರೆಗೆ ಸ್ವಾಮೀಜಿಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. 25 ಸಂಸದರನ್ನೂ ಕರೆದುಕೊಂಡು ಹೋಗಿ ಅರಣ್ಯ ಇಲಾಖೆಯ ಎನ್‌ಒಸಿ ಕೇಳಿದರೆ 5 ನಿಮಿಷದಲ್ಲಿ ಸಿಗುತ್ತದೆ. 15 ದಿನಗಳಲ್ಲಿ ಕೆಲಸ ಶುರು ಮಾಡಬಹುದು, ಯಾವುದೇ ಹಳ್ಳಿ ಮುಳುಗಡೆ ಆಗುವುದಿಲ್ಲ ಎಂದು ಹೇಳಿದರು.
ಓದಿ:ರಾಜ್ಯದಲ್ಲಿ ಕಠಿಣ ಕ್ರಮ ಕುರಿತು ನಾಳೆ ತಜ್ಞರ ಜೊತೆ ಸಭೆ, ಗುರುವಾರ ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ
ರಾಜಕಾರಣ ಎಂದು ಬಿಂಬಿಸಲಾಗುತ್ತಿದೆ:ನಮ್ಮ ಪಾದಯಾತ್ರೆಯನ್ನು ರಾಜಕಾರಣಕ್ಕಾಗಿ ನಡೆಸಲಾತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ನಮಗೆ ಸಾಮಾಜಿಕ ಕಳಕಳಿಯಿದೆ, ಅಧಿಕಾರ ಒಂದೇ ಮುಖ್ಯವಲ್ಲ.
ಬಹುತೇಕ ವಿಷಯಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲೂ ನಾವು ಹೋರಾಟ ಮಾಡಿದ್ದೇವೆ. ಕುಡಿಯುವ ನೀರು ಯೋಜನೆಗೆ ಎನ್‌ಒಸಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇವಲ ಪರಿಸರ ಇಲಾಖೆ ಅನುಮತಿ ಅಗತ್ಯವಿದೆ ಎಂದು ತಿಳಿಸಿದರು.
ಈ ಹೋರಾಟದಲ್ಲಿ ಭಾಗಿಯಾಗುವಂತೆ ಸಮಾಜದ ಎಲ್ಲಾ ಸ್ಥಳದ ಮುಖಂಡರು, ನಾಯಕರು, ಮಠಾಧಿತಿಗಳು, ಹಾಲಿ ಮಾಜಿ ಶಾಸಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೇವೆ. ಹೋರಾಟದ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದೆ.