ಕರ್ನಾಟಕ

karnataka

ರಾಜನಿಗೆ ಜನರು ಚಾಟಿ ಬೀಸಬೇಕಿದೆ : ಡಾ. ಹೆಚ್​​​.ಸಿ. ಮಹದೇವಪ್ಪ

By

Published : Feb 27, 2021, 3:32 PM IST

ಸಂವಿಧಾನದ ವ್ಯವಸ್ಥೆ ಹೋಗಿದೆ. ದೇಶ ಆಳುತ್ತಿರುವ ರಾಜನ ವಿರುದ್ಧ (ಪ್ರಧಾನಿ ಮೋದಿ) ದೇಶದ ಜನ ಚಾಟಿ ಬೀಸದೇ ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವುದು ಕಷ್ಟವಾಗಲಿದೆ ಎಂದು ಮಾಜಿ ಸಚಿವ ಡಾ. ಹೆಚ್​.ಸಿ. ಮಹದೇವಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

king-needs-people-whipping-hc-mahadevappa-said
ಡಾ ಹೆಚ್​ ​ಸಿ ಮಹದೇವಪ್ಪ

ಮೈಸೂರು: ರಾಜನಿಗೆ ದೇಶದ ಜನ ಚಾಟಿ ಬೀಸದೇ ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲವೆಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಪ್ರಧಾನಿ ಮೋದಿ ಅವರಿಗೆ ಕುಟುಕಿದರು.

ಮಾನಸ ಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ 'ದಲಿತ ಚಳವಳಿ ಮತ್ತು ರೈತ ಚಳವಳಿ ಒಂದು ಮುಖಾಮುಖಿ' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಇಂದು ಧರ್ಮ ಹಾಗೂ ಜಾತಿ ಆಧರಿತವಾಗಿ ನಡೆದುಕೊಂಡು ಹೋಗುತ್ತಿದೆ. ಹೀಗಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು‌.

ರಾಜನಿಗೆ ಜನರು ಚಾಟಿ ಬೀಸ ಬೇಕಿದೆ

ಸಂವಿಧಾನದ ವ್ಯವಸ್ಥೆ ಹೋಗಿದೆ. ದೇಶ ಆಳುತ್ತಿರುವ ರಾಜನ ವಿರುದ್ಧ (ಪ್ರಧಾನಿ ಮೋದಿ) ದೇಶದ ಜನ ಚಾಟಿ ಬೀಸದೇ ಹೋದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವುದು ಕಷ್ಟವಾಗಲಿದೆ. ದಲಿತ, ಮಹಿಳಾ ಹಾಗೂ ವಿವಿಧ ಸಂಘಟನೆಗಳು ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಪ್ರಶ್ನೆ ಮಾಡುವವರನ್ನು ಅಪರಾಧಿಗಳೆಂದು ಬಿಂಬಿಸಲಾಗುತ್ತಿದೆ. ಹೀಗಾದರೆ ದೇಶದ ವ್ಯವಸ್ಥೆ ಎತ್ತ ಸಾಗುತ್ತಿದೆ. ಪ್ರಶ್ನೆ ಮಾಡುವ ರಾಜಕಾರಣಿ ಬಾಯಿಯನ್ನ ಪಕ್ಷಗಳೇ ಮುಚ್ಚಿಸುತ್ತಿವೆ ಎಂದರು.

ABOUT THE AUTHOR

...view details