ಮೈಸೂರು: ಅಪಹರಣಗೊಂಡಿದ್ದ ನಗರದ ಬೆಮಲ್ ಬಡಾವಣೆಯ ವೈದ್ಯ ದಂಪತಿಯ ಪುತ್ರನನ್ನು ಪೊಲೀಸರು ಚಾಣಾಕ್ಷತೆಯಿಂದ ರಕ್ಷಿಸಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈದ್ಯ ದಂಪತಿ ಮಗನ ಕಿಡ್ನಾಪ್ ಪ್ರಕರಣ: ಚಾಣಾಕ್ಷತನದಿಂದ ಬಾಲಕನ ರಕ್ಷಣೆ - ಕುವೆಂಪು ನಗರ ಪೊಲೀಸ್ ಠಾಣೆ
ಮೈಸೂರು ನಗರದ ಬೆಮಲ್ ಬಡಾವಣೆಯ ರಸ್ತೆ ಮೇಲೆ ಸೈಕಲ್ನಲ್ಲಿ ಆಟವಾಡುತ್ತಿದ್ದ 12 ವರ್ಷದ ವೈದ್ಯ ದಂಪತಿಯ ಮಗನನ್ನು ನೀಲಿ ಬಣ್ಣದ ಕಾರಿನಲ್ಲಿ ಬಂದ ಅಪಹರಣಕಾರರು ನಿನ್ನೆ ಕಿಡ್ನಾಪ್ ಮಾಡಿದ್ದರು. ಇದೀಗ ಪೊಲೀಸರು ಚಾಣಾಕ್ಷತೆಯಿಂದ ಬಾಲಕನನ್ನು ರಕ್ಷಿಸಿದ್ದಾರೆ.
ವೈದ್ಯ ದಂಪತಿ ಮಗನ ಕಿಡ್ನಾಪ್ ಪ್ರಕರಣ
ನಿನ್ನೆ ರಸ್ತೆ ಮೇಲೆ ಸೈಕಲ್ನಲ್ಲಿ ಆಟವಾಡುತ್ತಿದ್ದ 12 ವರ್ಷದ ವೈದ್ಯ ದಂಪತಿ ಮಗನನ್ನು ನೀಲಿ ಬಣ್ಣದ ಕಾರಿನಲ್ಲಿ ಬಂದ ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ತಕ್ಷಣವೇ ಈ ವಿಚಾರವನ್ನು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಗುಪ್ತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಪಹರಣಕಾರರಿಂದ ಮಗುವನ್ನು ರಕ್ಷಣೆ ಮಾಡಿದ್ದು, ಈ ಸಂಬಂಧ ಇಂದು ನಗರ ಪೊಲೀಸ್ ಆಯುಕ್ತರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:ನಮಗೆ ಇಷ್ಟ ಇರದಿದ್ರೂ ಅಮೆರಿಕಕ್ಕೆ ಓದಲು ಹೋದ.. ಮಗನ ಸಾವಿನ ಸುದ್ದಿ ತಿಳಿದು ಆಘಾತಕೊಳ್ಳಗಾದ ತಂದೆ!
Last Updated : Jun 24, 2022, 12:20 PM IST