ಕರ್ನಾಟಕ

karnataka

ETV Bharat / city

ನಮಗೇ ಕುಡಿಯಲು ನೀರಿಲ್ಲ, ತಮಿಳುನಾಡಿಗೆ ಹೇಗೆ ಬಿಡೋಣ ? - undefined

ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ವಿವಾದ ಸದಾ ಇರುತ್ತದೆ. ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದರು ದರ್ಶನ್​​.

ದರ್ಶನ್

By

Published : May 29, 2019, 3:17 PM IST

Updated : May 29, 2019, 3:24 PM IST

ಮೈಸೂರು:ನಮಗೆ ಸರಿಯಾಗಿ ಕುಡಿಯಲು ನೀರಿಲ್ಲ. ಅಂತಹದರಲ್ಲಿ ತಮಿಳುನಾಡಿಗೆ ಹೇಗೆ ನೀರು ಬಿಡುವುದು. ಮೊದ್ಲು ನಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೇಳಿದ್ದಾರೆ.

ಕಾವೇರಿ ನೀರಿನ ಬಗ್ಗೆ ನಟ ದರ್ಶನ್​ ಮಾತು

ನಗರದಲ್ಲಿಂದು 'ಈಟಿವಿ ಭಾರತ್' ನೊಂದಿಗೆ ಮಾತಾಡಿರುವ ಅವರು, ಕಳೆದ ವರ್ಷ ಉತ್ತಮ ಮಳೆಯಾಗಿ ತಮಿಳುನಾಡಿಗೆ ಬೇಡವೆಂದರೂ ನೀರು ಕೊಟ್ಟಿದ್ದೇವೆ. ಆದರೆ, ಈ ಬಾರಿ ಸರಿಯಾಗಿ ಮಳೆ ಬಿದ್ದಿಲ್ಲ, ಅಣೆಕಟ್ಟು ತುಂಬಿಲ್ಲ, ಅವರಿಗೆ ಹೇಗೆ ನೀರು‌ ಕೊಡುವುದು ಎಂದು ಪ್ರಶ್ನಿಸಿದರು. ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ವಿವಾದ ಸದಾ ಇರುತ್ತದೆ. ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದರು.

ಇನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವು ಮಂಡ್ಯ ಜನತೆ ನೀಡಿದ ದೊಡ್ಡ ಉಡುಗೊರೆ. ಮಂಡ್ಯ ಜನರ ನಿರೀಕ್ಷೆಗೆ ಮೀರಿ ಸುಮಲತಾ ಅಂಬರೀಶ್ ಕೆಲಸ ಮಾಡುತ್ತಾರೆ ಎಂದು ಹೇಳಿದರು.

Last Updated : May 29, 2019, 3:24 PM IST

For All Latest Updates

TAGGED:

ABOUT THE AUTHOR

...view details