ಮೈಸೂರು: ಕೋವಿಡ್ನಿಂದ ಮೂರು ಬಾರಿ ಮುಂದೂಡಲ್ಪಟ್ಟಿದ್ದ ಕೆ-ಸೆಟ್ ಪರೀಕ್ಷೆಯನ್ನು ಸೆ. 20 ರಂದು ನಡೆಸಲು ರಾಜ್ಯ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.
ಸೆ. 20 ರಂದು ಕೆ-ಸೆಟ್ ಪರೀಕ್ಷೆ: ಸರ್ಕಾರದ ಅನುಮತಿ - Mysore University
ಕೊರೊನಾದಿಂದ ಎರಡು ಬಾರಿ ನಿಗದಿಯಾಗಿ ಮುಂದೂಡಲ್ಪಟ್ಟಿದ್ದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು ಇದೇ ಸೆ. 20 ರಂದು ನಡೆಸಲು ಸರ್ಕಾರ ಅನುಮತಿ ನೀಡಿದೆ.
ಇದೇ ಸೆ. 20 ರಂದು ಕೆ-ಸೆಟ್ ಪರೀಕ್ಷೆ
ಮೈಸೂರು ವಿಶ್ವವಿದ್ಯಾನಿಲಯ ನಡೆಸುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯು ಕೋವಿಡ್ನಿಂದ ಮೂರು ಬಾರಿ ಮುಂದೂಡಲ್ಪಟ್ಟಿತ್ತು. ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯವು ಹೊಸ ದಿನಾಂಕವನ್ನು ನಿಗದಿಪಡಿಸುವಂತೆ ಸರ್ಕಾರಕ್ಕೆ ಎರಡು ಪತ್ರವನ್ನು ಬರೆದಿತ್ತು.
ಇದಕ್ಕೆ ರಾಜ್ಯ ಸರ್ಕಾರವೂ ಇದೇ ಸೆ. 20 ರಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಿದೆ. ಅದರಂತೆ ಸೆ. 20 ರಂದು ಕೆ-ಸೆಟ್ ಪರೀಕ್ಷೆ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಹೇಮಂತ್ ಕುಮಾರ್ ತಿಳಿಸಿದ್ದಾರೆ.