ಕರ್ನಾಟಕ

karnataka

ETV Bharat / city

ಜುಬಿಲೆಂಟ್ ಕಾರ್ಖಾನೆ ಕಾರ್ಮಿಕ ಸಾವು: ಮಾಹಿತಿ ನೀಡದ ಅಧಿಕಾರಿಗಳು - ಮೈಸೂರು ಜ್ಯುಬಿಲಿಯಂಟ್​ ಕಾರ್ಖಾನೆ ಕಾರ್ಮಿಕ ಸಾವು

Jubilant factory worker death : ಜುಬಿಲೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಇದು ವರೆಗೂ ಕಾರ್ಮಿಕನ ಸಾವಿನ ಕುರಿತು ಯಾರೂ ಮಾಹಿತಿ ನೀಡಿಲ್ಲ. ಅಲ್ಲದೇ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿಲ್ಲ.

jubilant-factory
ಜುಬಿಲೆಂಟ್ ಕಾರ್ಖಾನೆ

By

Published : Dec 2, 2021, 5:39 PM IST

ಮೈಸೂರು: ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜುಬಿಲೆಂಟ್ ಕಾರ್ಖಾನೆ ಕಾರ್ಮಿಕ ಸಾವು: ಕಾರ್ಖಾನೆಯ ಫ್ಲಾಟ್ 1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರವಾರ ಮೂಲದ ಕಾರ್ಮಿಕ ಶಿವಾನಂದ (49) ಮೃತ ದುರ್ದೈವಿ. ಕಾರ್ಖಾನೆಯಲ್ಲಿ ಹಲವಾರು ವರ್ಷಗಳಿಂದ ಶಿವಾನಂದ ಖಾಯಂ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದನು.‌ ಇಂದು ಅನುಮಾನಾಸ್ಪದ ರೀತಿಯಲ್ಲಿ ಕಾರ್ಖಾನೆಯಲ್ಲಿಯೇ ಸಾವನ್ನಪ್ಪಿದ್ದಾನೆ.

ಸದ್ಯ ಕಾರ್ಮಿಕನ ಸಾವಿನ ಕುರಿತು ಯಾವ ಅಧಿಕಾರಿಯೂ ಸ್ಪಷ್ಟ ಮಾಹಿತಿ ತಿಳಿಸುತ್ತಿಲ್ಲ. ಅಲ್ಲದೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಹ ಸ್ಥಳಕ್ಕಾಗಮಿಸಿಲ್ಲ‌ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕನ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ABOUT THE AUTHOR

...view details