ಮೈಸೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಇಂದು ದೇಶಾದ್ಯಂತ ಬಿಡುಗಡೆಯಾಗಿದ್ದು, ಮೈಸೂರಿನ ಗಾಯತ್ರಿ ಚಿತ್ರ ಮಂದಿರದ ಮುಂಭಾಗದಲ್ಲಿ ವೀರ ಕನ್ನಡಿಗ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಪುನೀತ್ ಕೊನೆಯ ಸಿನಿಮಾ ಜೇಮ್ಸ್ ನೆನೆಪಿಗಾಗಿ ಕೀ ಚೈನ್ ಹಂಚಿ ಸಂಭ್ರಮ ಪಡುತ್ತಿದ್ದಾರೆ.
ಜೇಮ್ಸ್ ಚಿತ್ರದ ನೆನಪಿಗಾಗಿ ಅಭಿಮಾನಿಗಳಿಂದ ಕೀ ಚೈನ್ ವಿತರಣೆ - Puneeth Rajkumar last Movie James
ದಿ. ನಟ ಪುನೀತ್ ರಾಜ್ಕುಮಾರ್ ಅಭಿನಯದ ಕೊನೇ ಸಿನಿಮಾ ಜೇಮ್ಸ್ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಜೇಮ್ಸ್ ಅಬ್ಬರಕ್ಕೆ ಫಿದಾ ಆಗಿದ್ದಾರೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ವೀರ ಕನ್ನಡಿಗ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘ ಜೇಮ್ಸ್ ಸಿನಿಮಾದ ಲೋಗೋವುಳ್ಳ ಕೀ ಚೈನ್ ಅನ್ನು ಉಚಿತವಾಗಿ ಹಂಚಿ ಕೊನೆಯ ಸಿನಿಮಾ ಸವಿ ನೆನಪಾಗಿಸಿಕೊಳ್ಳುತ್ತಿದ್ದಾರೆ.
ಜೇಮ್ಸ್ ಸಿನಿಮಾದ ಅಬ್ಬರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಮೈಸೂರಿನ ಹಲವು ಥಿಯೇಟರ್ಗಳ ಮುಂದೆ ಅಭಿಮಾನಿಗಳ ದಂಡು ಹರಿದು ಬಂದಿದೆ. ಹಲವು ಮಂದಿ ಜೇಮ್ಸ್ ನೋಡುತ್ತಾ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೇಮ್ಸ್ ಸಿನಿಮಾದ ಲೋಗೋವುಳ್ಳ ಕೀ ಚೈನ್ ಅನ್ನು ಸದಸ್ಯರು ಉಚಿತವಾಗಿ ನೀಡುತ್ತಿದ್ದಾರೆ.
ವೀರ ಕನ್ನಡಿಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸದಸ್ಯ ಶ್ರೀನಿವಾಸ್ ಮಾತನಾಡಿ, ಪುನೀತ್ ರಾಜ್ ಕುಮಾರ್ ನೆನಪಿಗಾಗಿ ರಾಜ್ಯಾದ್ಯಂತ ಕೀ ಚೈನ್ ಕೊಡಬೇಕು ಅಂದು ಕೊಂಡಿದ್ದೇವೆ. ಇಂದು ಸಾಂಕೇತಿಕವಾಗಿ 2 ಸಾವಿರ ಕೀ ಚೈನ್ ಕೊಡುತ್ತಿದ್ದೇವೆ ಎಂದರು.