ಕರ್ನಾಟಕ

karnataka

ETV Bharat / city

ಕೈಗಾರಿಕೆ ಕಲಿಕೆಯಲ್ಲಿರುವ ಅನಗತ್ಯ ಕೋರ್ಸ್​​​​ ಮುಚ್ಚುತ್ತೇವೆ: ಡಾ. ಸಿ. ಎನ್. ಅಶ್ವತ್ಥ ನಾರಾಯಣ್ - ಐಟಿಐ ಕಲಿಕೆ ಜೊತೆ ಇಂಟರ್ನಶಿಪ್

ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗೆ ಬೇಕಾಗುವಂಥ ಅಗತ್ಯ ಕೋರ್ಸ್​​​ಗಳನ್ನು ಜಾರಿಗೊಳಿಸಿ, ಅನಗತ್ಯ ಕೋರ್ಸ್​​ಗಳನ್ನು ನಿಲ್ಲಿಸುತ್ತೇವೆ. ಐಟಿಐ ಕಲಿಕೆ ಜೊತೆ ಇಂಟರ್ನಶಿಪ್ ಮಾಡಿಸಲಾಗುವುದು. ನಂತರ ಕೈಗಾರಿಕೆಗಳ ಅಪ್ರೆಂಟಿಸ್​ಗೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಗೆ ರಾಜ್ಯ ಸರ್ಕಾರದಿಂದ 1500ರೂ. ಶಿಷ್ಯವೇತನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ ಹೇಳಿದರು.

industrial-learning-unnecessary-course-will-close
ಸಿಎನ್ ಅಶ್ವತ್ಥ ನಾರಾಯಣ್

By

Published : Jan 25, 2021, 5:51 PM IST

ಮೈಸೂರು: ಅನಗತ್ಯ ಐಟಿಐ ಕೋರ್ಸ್​ಗಳನ್ನು ಮುಚ್ಚಲಾಗುವುದು ಹಾಗೂ ಐಟಿಐ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ‌. ಸಿ.ಎನ್‌. ಅಶ್ವತ್ಥ ನಾರಾಯಣ್ ಹೇಳಿದರು.

ವಿಶ್ವೇಶ್ವರಯ್ಯ ಕೈಗಾರಿಕಾ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟಿಸಿದ ಡಿಸಿಎಂ

ಮೈಸೂರಿನ ಬೋಗಾದಿಯ ಎರಡನೇ ಹಂತದಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗೆ ಬೇಕಾಗುವಂಥ ಅಗತ್ಯ ಕೋರ್ಸ್​​​ಗಳನ್ನು ಜಾರಿಗೊಳಿಸಿ, ಅನಗತ್ಯ ಕೋರ್ಸ್​​ಗಳನ್ನು ನಿಲ್ಲಿಸುತ್ತೇವೆ. ಐಟಿಐ ಕಲಿಕೆ ಜೊತೆ ಇಂಟರ್ನಶಿಪ್ ಮಾಡಿಸಲಾಗುವುದು. ನಂತರ ಕೈಗಾರಿಕೆಗಳ ಅಪ್ರೆಂಟಿಸ್​ಗೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಗೆ ರಾಜ್ಯ ಸರ್ಕಾರದಿಂದ 1500ರೂ. ಶಿಷ್ಯವೇತನ ನೀಡಲಾಗುವುದು ಎಂದರು.

ವಿಶ್ವೇಶ್ವರಯ್ಯ ಕೈಗಾರಿಕಾ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟಿಸಿದ ಡಿಸಿಎಂ

ಐಟಿಐ ಸಂಸ್ಥೆಗಳು ಗುಣಮಟ್ಟದ್ದಾಗಿರಬೇಕು ಹಾಗೂ ಪ್ರಸ್ತುತ ವಿದ್ಯಾರ್ಥಿಗಳಿಗೆ ತಕ್ಕಂತೆ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಐಟಿಐ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಅಲೆಯದಂತೆ ಹೊಸ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ಪ್ರಗತಿ ಕಾಣುತ್ತಿದೆ‌. ಇದರ ಗುಣಮಟ್ಟ ಹೆಚ್ಚಿಸಲಾಗುವುದು. ಈಗ ಕೆಎಸ್​ಒಯುನಲ್ಲಿ 17ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮುಂದಿನ ದಿನಗಳಲ್ಲಿ 1 ಲಕ್ಷ ವಿದ್ಯಾರ್ಥಿಗಳು ಓದಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ABOUT THE AUTHOR

...view details