ಕರ್ನಾಟಕ

karnataka

ETV Bharat / city

ವಯನಾಡಿನಲ್ಲಿ ನಿರಂತರ ಮಳೆ: ಕಬಿನಿ ಜಲಾಶಯದ ಒಳಹರಿವು ಹೆಚ್ಚಳ - ವಯನಾಡಿನಲ್ಲಿ ನಿರಂತರ ಮಳೆ

ಕೇರಳದ ವಯನಾಡು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

Mysuru
ಕಬಿನಿ ಜಲಾಶಯದ ಒಳಹರಿವು ಹೆಚ್ಚಳ

By

Published : Jun 16, 2021, 1:31 PM IST

ಮೈಸೂರು:ಕೇರಳದ ವಯನಾಡು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 84 ಅಡಿಯಿದ್ದು, ಇಂದಿನ ನೀರಿನ ಮಟ್ಟ 66.83 ಅಡಿ ಇದೆ.

ಕಬಿನಿ ಜಲಾಶಯದ ಒಳಹರಿವು ಹೆಚ್ಚಳ

ಜಲಾಶಯದ ಶೇಖರಣೆಯ ಗರಿಷ್ಠ ಪ್ರಮಾಣ 19.52 ಟಿಎಂಸಿಯಾಗಿದ್ದು, ಇಂದಿನ ಶೇಖರಣೆ ಮಟ್ಟ 10.18 ಟಿಎಂಸಿ ಇದೆ. ವಯನಾಡು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ 7,197 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಕಬಿನಿ ಜಲಾಶಯಕ್ಕೆ ಹರಿದು ಬಂದಿದೆ‌. 700 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಕಬಿನಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಸರ್ಕಾರದಿಂದ ಸತ್ತವರ ಹೆಸರಲ್ಲೂ ಲೂಟಿ; ಡಿಕೆಶಿ ಆರೋಪ

ABOUT THE AUTHOR

...view details