ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಬ್ಯಾಂಕ್ ನೋಟ್ ಇಂಕ್ ಘಟಕ ಉದ್ಘಾಟಿಸಿದ ಆರ್​ಬಿಐ ಗವರ್ನರ್​

ಬ್ಯಾಂಕ್ ನೋಟುಗಳ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಆರ್​ಬಿಎನ್​ಎಂಪಿಎಲ್​, ವರ್ಣಿಕಾ ಇಂಕ್ ಘಟಕವನ್ನು ಸ್ಥಾಪಿಸಿದ್ದು, ಈ ಘಟಕದಿಂದ ಬ್ಯಾಂಕ್ ನೋಟುಗಳ ಪ್ರಿಂಟಿಂಗ್​ಗೆ ಅವಶ್ಯವಿರುವ ಇಂಕ್ ಉತ್ಪಾದಿಸಲಾಗುತ್ತದೆ‌. ಇದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿದೆ.

RBI Governor inaugerated Bank note inc unit
ಮೈಸೂರಿನಲ್ಲಿ ಬ್ಯಾಂಕ್ ನೋಟ್ ಇಂಕ್ ಘಟಕ ಉದ್ಘಾಟಿಸಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

By

Published : Mar 31, 2022, 12:41 PM IST

ಮೈಸೂರು: ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್​ ಶಕ್ತಿಕಾಂತ ದಾಸ್ ಅವರು ಮೈಸೂರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ (ಬಿಆರ್​ಬಿಎನ್​ಎಂಪಿಎಲ್) ವರ್ಣಿಕಾ ಇಂಕ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ್ದಾರೆ. ಇದರ ಜೊತೆಗೆ ಲರ್ನಿಂಗ್ ಅಂಡ್​​​ ಡೆವಲಪ್​ಮೆಂಟ್ ಸೆಂಟರ್ ( ಎಲ್ ಡಿಸಿ) ಸ್ಥಾಪನೆಗೆ ಗವರ್ನರ್​ ಶಂಕುಸ್ಥಾಪನೆ ಮಾಡಿದರು.

ಬ್ಯಾಂಕ್ ನೋಟುಗಳ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಬಿಆರ್​ಬಿಎನ್​ಎಂಪಿಎಲ್​, ವರ್ಣಿಕಾ ಇಂಕ್ ಘಟಕವನ್ನು ವಾರ್ಷಿಕವಾಗಿ 1500 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದಲ್ಲಿ ಸ್ಥಾಪಿಸಿದ್ದಾರೆ. ಈ ಘಟಕದಿಂದ ಬ್ಯಾಂಕ್ ನೋಟುಗಳ ಪ್ರಿಂಟಿಂಗ್​ಗೆ ಅವಶ್ಯವಿರುವ ಇಂಕ್ ಅನ್ನು ಉತ್ಪಾದಿಸಲಾಗುತ್ತದೆ‌. ಇದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿದೆ.

ಈ ಘಟಕವು ಕಲರ್ ಶಿಫ್ಟ್ ಇಂಟಾಗ್ಲಿಯೋ ಇಂಕ್ (ಸಿಎಸ್ಐಐ) ಉತ್ಪಾದಿಸುತ್ತಿದ್ದು, ಭಾರತದಲ್ಲಿರುವ ಬ್ಯಾಂಕ್ ನೋಟು ಮುದ್ರಣಗಳಿಗೆ ಅವಶ್ಯಕವಾಗಿರುವ ಇಂಕ್ ಪೂರೈಸುವ ಉದ್ದೇಶ ಹೊಂದಿದೆ. ಜೊತೆಗೆ ಪರಿಣಾಮಕಾರಿಯಾಗಿ ಬ್ಯಾಂಕ್ ನೋಟು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.

ಲರ್ನಿಂಗ್ ಅಂಡ್​ ಡೆವಲಪ್​ಮೆಂಟ್ ಸೆಂಟರ್ ಅನ್ನು ಭದ್ರತಾ ಮುದ್ರಣ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್​ಪಿಎಂಸಿಐಎಲ್) ಸಹಯೋಗದೊಂದಿಗೆ, ಬ್ಯಾಂಕ್ ನೋಟು ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್​ಪಿಎಂಸಿಎಲ್ ಜಂಟಿ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿದೆ.

ಲರ್ನಿಂಗ್ ಅಂಡ್​ ಡೆವಲಪ್​ಮೆಂಟ್ ದೃಢವಾದ ಜ್ಞಾನ ಪ್ರಸರಣ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಈ ಕೇಂದ್ರವನ್ನು ಬಿಆರ್​ಬಿಎನ್​ಎಂಪಿಎಲ್ ನಿರ್ವಹಣೆ ಮಾಡುತ್ತದೆ ಎಂದರು.

For All Latest Updates

TAGGED:

ABOUT THE AUTHOR

...view details