ಕರ್ನಾಟಕ

karnataka

ETV Bharat / city

ಭೀಕರ ಬರ ನೋಡಿ ಎಚ್ಚೆತ್ತ ಜನ, ಜೀವಜಲದ ಸಂರಕ್ಷಣೆ ಮಾಡಿದ ಬಗೆ ಹೇಗೆ ಗೊತ್ತೇ..? - undefined

ನೀರಿನ ದಾಹ ನೀಗಿಸಿಕೊಳ್ಳಲು ಜಾನುವಾರುಗಳು ಪರದಾಡಿ‌‌ ನರಳುವುದನ್ನು ಕೆಲ ವರ್ಷಗಳ ಹಿಂದೆ ನೋಡಿದ ಗ್ರಾಮಸ್ಥರು, ಮತ್ತೆ ಇಂತಹ ಸ್ಥಿತಿ ನಿರ್ಮಾಣವಾಗಬಾರದು ಎಂದು ಬರಗಾಲ ಬಂದರೂ ಕೆರೆ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದಾರೆ.

ಜಾನುವಾರುಗಳಿಗಾಗಿ ಕೆರೆ ಮೀಸಲು

By

Published : Apr 20, 2019, 12:05 AM IST

ಮೈಸೂರು: ಬಿರುಬಿಸಿಲಿಗೆ ಭೂಮಿ ಸುಡುತ್ತಿದೆ. ನೀರಿನ ದಾಹ ನೀಗಿಸಲು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಸಂದಂರ್ಭದಲ್ಲಿ ಗ್ರಾಮಸ್ಥರು ಎಚ್ಚೆತ್ತುಕೊಂಡು ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಜಾನುವಾರುಗಳಿಗಾಗಿ ಕೆರೆ ನೀರು ಮೀಸಲಿಟ್ಟ ಗ್ರಾಮಸ್ಥರು

ಮೈಸೂರು ತಾಲ್ಲೂಕಿನ ದೊಡ್ಡರಸಿಕೆರೆ ಗ್ರಾಮಸ್ಥರು, ಗ್ರಾಮದ ಕೆರೆಗೆ ಮರುಜೀವ ಕೊಟ್ಟು, ಮುತುವರ್ಜಿಯಿಂದ ನೀರು ತುಂಬಿಸಿದ್ದಾರೆ. ಕಳೆದ ವರ್ಷ ಉತ್ತಮ ಮಳೆಯಾದಾಗ ಕೆರೆ ತುಂಬಿ ತುಳುಕಿತು. ಆದರೀಗ ಬೇಸಿಗೆ ಇರುವುದರಿಂದ ಕೆರೆಗಳಲ್ಲಿ ಬಟ್ಟೆ, ಪಾತ್ರೆಗಳನ್ನು ತೊಳೆಯದಂತೆ ತಾವೇ ನಿಯಮ ರೂಪಿಸಿಕೊಂಡಿದ್ದಾರೆ. ಮಳೆ ಆಗುವವರೆಗೂ ಕೆರೆಯ ನೀರನ್ನು ಜಾನುವಾರುಗಳ ಬಳಕೆಗೆ ಮೀಸಲಿಡಲಾಗಿದೆ.

For All Latest Updates

TAGGED:

ABOUT THE AUTHOR

...view details