ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಾವಿನ ಬಗ್ಗೆ ಶೀಘ್ರದಲ್ಲೇ ಡೆತ್ ಆಡಿಟಿಂಗ್ ಮಾಡಿಸಿ, ಸಾರ್ವಜನಿಕರಿಗೆ ನಿಜವಾದ ಅಂಕಿ - ಅಂಶ ಬಿಡುಗಡೆ ಮಾಡುತ್ತೇನೆ ಎಂದು ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದ್ದಾರೆ.
ಮೈಸೂರಿನಲ್ಲಿ ಡೆತ್ ರೇಟ್ ಆಡಿಟಿಂಗ್ ಮಾಡಿಸುತ್ತೇನೆ: ಹೆಚ್.ವಿ.ರಾಜೀವ್
ಸಂಸದ ಪ್ರತಾಪ್ ಸಿಂಹ ಅವರು ಕೂಡ ಡೇತ್ರೇಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಕೊರೊನಾ ಸೋಂಕಿತರ ಸಾವಿನ ಬಗ್ಗೆ ಶೀಘ್ರದಲ್ಲೇ ಡೆತ್ ಆಡಿಟಿಂಗ್ ಮಾಡಿಸುತ್ತೇನೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.
ಮುಡಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರು ಕೂಡ ಡೇತ್ರೇಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಿತ್ಯ ಮಾಧ್ಯಮಗಳಲ್ಲಿ ಜನ ಪ್ರತಿನಿಧಿಗಳಲ್ಲಿ ಡೇತ್ ರೇಟ್ ಬಗ್ಗೆ ಅನುಮಾನ ಮೂಡುತ್ತಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಚರ್ಚೆ ಮಾಡ್ತಿನಿ ಎಂದರು.
ಪಿಪಿಇ ಕಿಟ್ಗಳನ್ನು ಬೆಳವತ್ತ ಗ್ರಾಮದ ನಾಲೆ ಬಳಿ ಬಿಸಾಡಿ ಹೋಗಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ, ಕೊರೊನಾ ಸೋಂಕಿತರ ಹಾಗೂ ಆಸ್ಪತ್ರೆಯ ತ್ಯಾಜ್ಯಗಳನ್ನ ಎಲ್ಲೆಂದರಲ್ಲಿ ಬಿಸಾಡದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.