ಮೈಸೂರು : ನಾನು ಸಹ ಮೈಸೂರು-ಕೊಡಗು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಸಂಸದ ಸಿ.ಹೆಚ್ ವಿಜಯಶಂಕರ್ ತಿಳಿಸಿದ್ದಾರೆ.
ಸಿದ್ದು ಭೇಟಿಯಾದ ಸಿ.ಹೆಚ್ ವಿಜಯಶಂಕರ್... ಸಿಗುತ್ತಾ ಮೈಸೂರು-ಕೊಡಗು ಟಿಕೆಟ್? - Aspirant
ನಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಆಕಾಂಕ್ಷಿ. ನನ್ನ ಮನವಿಯನ್ನ ಪಕ್ಷದ ಮುಂದೆ ಇಟ್ಟಿದ್ದೇನೆ. ಪಕ್ಷ ನಿರ್ಧಾರ ಕೈಗೊಂಡು ಅಭ್ಯರ್ಥಿ ಯಾರೆಂದು ಪ್ರಕಟಿಸಲಿದೆ ಎಂದು ಮಾಜಿ ಸಂಸದ ಸಿ.ಹೆಚ್ ವಿಜಯಶಂಕರ್ ಹೇಳಿದ್ದಾರೆ.
![ಸಿದ್ದು ಭೇಟಿಯಾದ ಸಿ.ಹೆಚ್ ವಿಜಯಶಂಕರ್... ಸಿಗುತ್ತಾ ಮೈಸೂರು-ಕೊಡಗು ಟಿಕೆಟ್?](https://etvbharatimages.akamaized.net/etvbharat/images/768-512-2698212-741-68a377f0-e0d5-4a09-8d15-f47bfb6a66fd.jpg)
ಇಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯಶಂಕರ್, ನಾನು ಮೈಸೂರು ಲೋಕಸಭಾ ಕ್ಷೇತ್ರದ ಆಕಾಂಕ್ಷಿ. ಇಲ್ಲಿ ನಾಲ್ವರು ಆಕಾಂಕ್ಷಿಗಳಿದ್ದಾರೆ. ನನ್ನ ಮನವಿಯನ್ನ ಪಕ್ಷದ ಮುಂದೆ ಇಟ್ಟಿದ್ದೇನೆ. ಪಕ್ಷ ನಿರ್ಧಾರ ಕೈಗೊಂಡು ಅಭ್ಯರ್ಥಿ ಯಾರೆಂದು ಪ್ರಕಟಿಸುತ್ತಾರೆ. ಆನಂತರ ನಾವೆಲ್ಲಾ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದರು.
ನಮ್ಮಂತೆಯೇ ಬಿಜೆಪಿಯಿಂದಲೂ ಅಧಿಕೃತ ಅಭ್ಯರ್ಥಿ ಘೋಷಣೆಯಾಗಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಯಾರು ಅಭ್ಯರ್ಥಿಯೆಂದು ಘೋಷಣೆ ಮಾಡುತ್ತಾರೆ. ಆನಂತರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇವೆ ಎಂದು ವಿಜಯಶಂಕರ್ ಹೇಳಿದರು.