ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ರಾತ್ರೋರಾತ್ರಿ ಶತಮಾನದ ಶಾಲೆ ನೆಲಸಮ - ramakrishna mission mysuru

ಎನ್​ಟಿಎಂ ಶಾಲೆಯನ್ನು ಕೆಡವಿ ಸ್ಮಾರಕ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿದ ಪ್ರಗತಿಪರರು ಶಾಲೆ ಉಳಿಸಿ ಹೋರಾಟ ಆರಂಭಿಸಿ ನ್ಯಾಯಾಲಯದ ಮೊರೆ ಹೋಗಿದ್ದರು

hundred years demolished in mysuru
ಮೈಸೂರಿನಲ್ಲಿ ರಾತ್ರೋರಾತ್ರಿ ಶತಮಾನದ ಶಾಲೆ ನೆಲಸಮ

By

Published : Feb 8, 2022, 2:37 PM IST

ಮೈಸೂರು: ಶತಮಾನದ ಕನ್ನಡ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನ ಮೈಸೂರಿನ ಜಿಲ್ಲಾಡಳಿತವು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನೆಲಸಮ ಮಾಡಿತು. ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರಿನ ಮಹಾರಾಣಿಯವರು ನಿರ್ಮಾಣ ಮಾಡಿದ್ದ ರಾಜ್ಯದ ಮೊದಲ ಹೆಣ್ಣು ಮಕ್ಕಳ ಶಾಲೆ ಹಾಗೂ ಶತಮಾನ ಕಂಡ ಶಾಲೆಯೆಂಬ ಕೀರ್ತಿ ಪಡೆದಿದ್ದ ಎನ್​ಟಿಎಂ ಶಾಲೆಯನ್ನ ಸೋಮವಾರ ರಾತ್ರಿ ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಜಿಲ್ಲಾಡಳಿತ ಜೆಸಿಬಿ ಸಹಾಯದಿಂದ ಶಾಲಾ ಕಟ್ಟಡವನ್ನು ಧ್ವಂಸ ಮಾಡಲಾಯಿತು.

ಶಾಲೆಯ ಧ್ವಂಸಕ್ಕೆ ಕಾರಣವೇನು?:ಶತಮಾನ ಕಂಡಿರುವ ಧ್ವಂಸಗೊಂಡ ಎನ್​ಟಿಎಂ ಶಾಲಾ ಆವರಣದಲ್ಲಿ ಸ್ವಾಮಿ ವಿವೇಕಾನಂದರು ವಾಸ್ತವ್ಯ ಹೂಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಶಾಲೆ ಜಾಗವನ್ನ ವಿವೇಕಾನಂದ ಸ್ಮಾರಕ ಮಾಡಲು 2013ರಲ್ಲಿ ಅಂದಿನ ಸರ್ಕಾರ ಈ ಶಾಲಾ ಸ್ಥಳವನ್ನ ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ವಹಿಸಿ ಆದೇಶ ಹೊರಡಿಸಿತ್ತು.

ಪ್ರತಿಭಟನಾಕಾರನ ವಶಕ್ಕೆ ಪಡೆದ ಪೊಲೀಸರು

ಆದರೆ ಶಾಲೆಯನ್ನು ಕೆಡವಿ ಸ್ಮಾರಕ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿದ ಪ್ರಗತಿಪರರು ಶಾಲೆ ಉಳಿಸಿ ಹೋರಾಟ ಆರಂಭಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ರಾಮಕೃಷ್ಣ ಆಶ್ರಮದ ಪರವೇ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸುಮಾರು ರಾತ್ರಿ 11.30ರ ಸಮಯದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಹಾಕಿ ಶತಮಾನದ ರಾಜ್ಯದ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನ ನೆಲಸಮ ಮಾಡಲಾಯಿತು.

ಸ್ಥಳದಲ್ಲಿ ಪ್ರತಿಭಟನೆ:ಶಾಲೆಯನ್ನ ನೆಲೆಸಮ ಮಾಡುತ್ತಾರೆ ಎಂಬ ವಿಚಾರ ತಿಳಿದ ಶಾಲಾ ಉಳಿಸಿ ಹೋರಾಟ ಸಮಿತಿಯ ಸದಸ್ಯರು ಜೆಸಿಬಿ ಮುಂದೆ ಮಲಗಿ ಶಾಲಾ ಕಟ್ಟಡವನ್ನು ನೆಲಸಮ ಮಾಡದಂತೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರಿಗೆ ನ್ಯಾಯಾಲಯದ ಆದೇಶವನ್ನ ಪೋಲಿಸರು ತೋರಿಸಿ ಮನವೊಲಿಸಲು ಯತ್ನಿಸಿದರು ಒಪ್ಪದಿದ್ದಾಗ, ಪ್ರತಿಭಟನಾಕಾರರನ್ನ ಪೊಲೀಸರು ತಮ್ಮ ವಶಕ್ಕೆ ಪಡೆದರು. ಸೋಮವಾರ ಮಧ್ಯರಾತ್ರಿ ಶಾಲೆಯನ್ನ ನೆಲಸಮ ಮಾಡಲಾಯಿತು.

ABOUT THE AUTHOR

...view details