ಕರ್ನಾಟಕ

karnataka

ETV Bharat / city

ಮೈಸೂರು-ಹುಬ್ಬಳ್ಳಿ ವಿಮಾನ ಸೇವೆಗೆ ಚಾಲನೆ - ವಿಮಾನ ಸೇವೆ

ವಾರದಲ್ಲಿ 3 ದಿನ ಮೈಸೂರು ಮತ್ತು ಹುಬ್ಬಳ್ಳಿ ನಡುವೆ ಸಂಪರ್ಕ ಕಲ್ಪಿಸುವ ವಿಮಾನಯಾನ ಸೇವೆಗೆ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು.

Hubli and mysuru flight service
ಮೈಸೂರು ಮತ್ತು ಹುಬ್ಬಳ್ಳಿ ವಿಮಾನ ಸೇವೆಗೆ ಚಾಲನೆ

By

Published : May 4, 2022, 7:30 AM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿ ಸಂಪರ್ಕಿಸುವ ವಿಮಾನ ಸೇವೆಗೆ ಮಂಗಳವಾರ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ವಾರದಲ್ಲಿ ಮೂರು ದಿನ ಈ ವಿಮಾನ ಸಂಚಾರ ನಡೆಸಲಿದೆ.

ಈ ಕುರಿತು ಮಾತನಾಡಿದ ಸಂಸದ ಪ್ರತಾಪಸಿಂಹ, ಮೈಸೂರು ಮತ್ತು ಹುಬ್ಬಳ್ಳಿ ನಡುವೆ ಸಂಚಾರ ಬೆಳೆಸುವ ಪ್ರಯಾಣಿಕರಿಗೆ ಇದೊಂದು ಉತ್ತಮ ಸೇವೆಯಾಗಿದ್ದು ವಾರದಲ್ಲಿ 3 ದಿನಗಳ ಕಾಲ ವಿಮಾನಯಾನ ಸೇವೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ 'ಉಡಾನ್ ಯೋಜನೆ' ಜಾರಿಗೆ ತಂದಿದ್ದರಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಅನುಕೂಲವಾಯಿತು. ಪ್ರಯಾಣಿಕರ ಸಂಖ್ಯೆಯೂ ಕೂಡ ಹೆಚ್ಚಾಯಿತು. ಜೊತೆಗೆ ಈ ವಿಮಾನ ಸೇವೆ ಪ್ರಾರಂಭಕ್ಕೆ ಸಹಕಾರ ನೀಡಿದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.


ಇದನ್ನೂ ಓದಿ:ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ: ಆರೋಪಿಗಳ ಜಾಮೀನು ಅರ್ಜಿ ವಜಾ

ABOUT THE AUTHOR

...view details