ಕರ್ನಾಟಕ

karnataka

ETV Bharat / city

ಸಹಕಾರಿ ಸಂಘದ ವತಿಯಿಂದ ಕಡಿಮೆ ದರದಲ್ಲಿ ನಿವೇಶನ: ಸಚಿವ ಎಸ್.ಟಿ.ಸೋಮಶೇಖರ್ - ಸಹಕಾರಿ ಸಂಘದಿಂದ ನಿವೇಶನ

ಮೈಸೂರು, ಬೆಂಗಳೂರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ಮಾತ್ರ ಸಹಕಾರಿ ಸಂಘಗಳು ಆ್ಯಕ್ಟಿವ್​​ ಆಗಿವೆ. ಸಹಕಾರಿ ಸಂಘಗಳೆಲ್ಲಿ ಆ್ಯಕ್ಟಿವ್​​ ಆಗಿ ಇರುತ್ತವೆಯೋ ಅಂತಹ ಜಿಲ್ಲೆಗಳಲ್ಲಿ ಕಡಿಮೆ ದರದಲ್ಲಿ ಸಹಕಾರಿ ಸಂಘದಿಂದಲೇ ನಿವೇಶನ ನೀಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

Minister ST Somashekhar
ಸಚಿವ ಎಸ್.ಟಿ ಸೋಮಶೇಖರ್

By

Published : Sep 16, 2021, 3:03 PM IST

ಮೈಸೂರು: ಸಹಕಾರಿ ಸಂಘಗಳು ಸಕ್ರಿಯವಾಗಿರುವ ಜಿಲ್ಲೆಗಳಲ್ಲಿ ಕಡಿಮೆ ದರದಲ್ಲಿ ಸಹಕಾರಿ ಸಂಘದಿಂದಲೇ ನಿವೇಶನ ನೀಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸಚಿವ ಎಸ್.ಟಿ.ಸೋಮಶೇಖರ್

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮುಡಾ ವತಿಯಿಂದ ನಾಗರಿಕ ಸೌಕರ್ಯ ನಿವೇಶನ ಪಟ್ಟಿ ಬಿಡುಗಡೆ ಮಾಡಿ‌ ನಂತರ ಅವರು ಮಾತನಾಡಿದರು.

ಮೈಸೂರು, ಬೆಂಗಳೂರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ಮಾತ್ರ ಸಹಕಾರಿ ಸಂಘಗಳು ಆ್ಯಕ್ಟಿವ್​​ ಆಗಿವೆ‌. ಎಲ್ಲೆಲ್ಲಿ ಸಂಘಗಳು ಸಕ್ರಿಯವಾಗಿವೆಯೋ ಅಲ್ಲಿ ಸಹಕಾರಿ ಸಂಘದಿಂದ ಜನರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಸೂಚನೆ ನೀಡಲಾಗಿದೆ. ಇದೇ ರೀತಿ ಗೃಹ ನಿರ್ಮಾಣ ಕಾರ್ಯವನ್ನು ಸಹಕಾರಿ ಸಂಘದಿಂದ ಮಾಡುತ್ತೇವೆ. ಭೂಮಿ‌ ಎಲ್ಲಿ ಲಭ್ಯವಿರುತ್ತದೆ ಅಂತಹ ಕಡೆ ಹಂತಹಂತವಾಗಿ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ನಾವೇನು ಮೃಗಗಳಾ? ಪ್ರಾಣಿಗಳಾ?: ಅವಧಿ ಮುಗಿದ ಮಾಸ್ಕ್‌ ಕೊಟ್ಟಿದ್ದಕ್ಕೆ ಪಿ.ಆರ್.ರಮೇಶ್ ಗರಂ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಡಾ ವತಿಯಿಂದ 24 ಕ್ಯಾಟಗರಿಗಳಿಗೆ, 300ಕ್ಕೂ ಹೆಚ್ಚು ನಿವೇಶನ ನೀಡಲಾಗುತ್ತಿದೆ ಎಂದರು.

ABOUT THE AUTHOR

...view details